ಕೊಚ್ಚಿ: ನಟಿಯ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ ಮತ್ತು ಅಪರಾಧಿಗಳಿಗೆ ಮಾತ್ರ ಶಿಕ್ಷೆಯಾಗಿದೆ. ಯೋಜನೆ ರೂಪಿಸಿದವರನ್ನು ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ದಿಲೀಪ್ ಅವರ ಮೊದಲ ಪತ್ನಿ, ಖ್ಯಾತ ಚಿತ್ರನಟಿ ಮಂಜು ವಾರಿಯರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಹೇಳಿದ್ದಾರೆ.
ಯೋಜನೆ ರೂಪಿಸಿದವರಿಗೂ ಶಿಕ್ಷೆಯಾದರೆ ಮಾತ್ರ ಸಂತ್ರಸ್ಥೆಗೆ ನ್ಯಾಯ ಲಭಿಸಿದಂತಾಗುತ್ತದೆ ಎಂದು ಮಂಜು ಹೇಳಿರುವರು.
ನ್ಯಾಯಾಲಯದ ಆದೇಶವನ್ನು ಸಂತ್ರಸ್ಥೆ ತೀವ್ರವಾಗಿ ಟೀಕಿಸಿದ್ದಾರೆ. ಆದೇಶದಲ್ಲಿ ಯಾವುದೇ ಪವಾಡ ನಡೆದಿಲ್ಲ ಮತ್ತು ನ್ಯಾಯಾಲಯದ ಮೇಲಿನ ಎಲ್ಲಾ ನಂಬಿಕೆಯನ್ನು ತಾನು ಕಳೆದುಕೊಂಡಿದ್ದೇನೆ ಎಂದು ಸಂತ್ರಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದಾರೆ.
ಈ ಕಾನೂನಿನ ಮುಂದೆ ಎಲ್ಲರೂ ಒಂದೇ ಆಗಿರುವುದಿಲ್ಲ ಮತ್ತು ತನ್ನ ಮೂಲಭೂತ ಹಕ್ಕುಗಳನ್ನು ರಕ್ಷಿಸಲಾಗಿಲ್ಲ ಎಂದು ಸಂತ್ರಸ್ಥೆಯ ನೋವನ್ನರಿತು ಮಂಜು ವಾರಿಯರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

