ತಿರುವನಂತಪುರಂ: ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಬಲ ಪ್ರದರ್ಶನ ನೀಡಿದೆ.
ಕೇರಳದಂತಹ ರಾಜ್ಯದಲ್ಲಿ ಅದು ಕೂಡ ಪ್ರಬಲವಾದ ತಿರುವನಂತಪುರಂ ಭಾಗದಲ್ಲಿ ಬಿಜೆಪಿ ಗೆದ್ದಿರುವುದು ಬಿಜೆಪಿಗೆ ಸ್ಪೂರ್ತಿದಾಯಕ ಮತ್ತು ಇತರ ಪಕ್ಷಗಳಿಗೆ ಶಾಕ್ ನೀಡಿದೆಯಂತೂ ಸತ್ಯ.
1987ರಲ್ಲಿ 26 ವರ್ಷದ ಮಲಯಾಳಿ ಮಹಿಳೆಯ ಹೆಸರು ಸುದ್ದಿಯಲ್ಲಿತ್ತು. ಅವರ ಹೆಸರು ಆರ್. ಶ್ರೀಲೇಖಾ. ಐಪಿಎಸ್ ಅಧಿಕಾರಿಯಾಗುವ ಕನಸನ್ನು ಸಾಧಿಸಿದ ಮೊದಲ ಮಲಯಾಳಿ ಮಹಿಳೆ. ಎರಡನೇ ಮಹಾಯುದ್ಧವನ್ನು ಎದುರಿಸಿ ಹೋರಾಡಿದ ವೇಲಾಯುಧನ್ ನಾಯರ್ ಎಂಬ ತಂದೆಯ ಮಗಳು ಕಠಿಣ ಪರಿಶ್ರಮದ ಮೂಲಕ ಈ ಹೆಮ್ಮೆಯ ಸಾಧನೆಯನ್ನು ಸಾಧಿಸಿದ್ದರು.
ಆ ಹುಡುಗಿ ತಿರುವನಂತಪುರಂ ನಗರದ ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ದರು. ಕಾಲೇಜು ಶಿಕ್ಷಕಿ, ರಿಸರ್ವ್ ಬ್ಯಾಂಕ್ ಅಧಿಕಾರಿ, ಬರಹಗಾರ್ತಿ ಮತ್ತು ಐಪಿಎಸ್ ಅಧಿಕಾರಿಯಾಗಿ ಹಲವು ಹುದ್ದೆಗಳನ್ನು ಅಲಂಕರಿಸಿರುವ ಶ್ರೀಲೇಖಾ, ಈಗ ತಿರುವನಂತಪುರಂನ ಸಸ್ತಮಂಗಲಂ ವಾರ್ಡ್ನ ಜನ ನಾಯಕಿಯಾಗಿ ಆಯ್ಕೆಯಾಗಿದದ್ಆರೆ. ರಾಜ್ಯದಲ್ಲೇ ಸಾಕಷ್ಟು ಗಮನ ಸೆಳೆದ ಸ್ಪರ್ಧಿಗಳಲ್ಲಿ ಶ್ರೀಲೇಖಾ ಕೂಡ ಒಬ್ಬರು.
ರಾಜಧಾನಿಯಲ್ಲಿ ನಟ ಮತ್ತು ಸಂಸದ ಸುರೇಶ್ ಗೋಪಿ ಅವರ ಮನೆಯೂ ಸಹ ಸಾಸ್ತಮಂಗಲಂ ವಾರ್ಡ್ನಲ್ಲಿ ಇದೆ. ಬಿಜೆಪಿ ಭಾರಿ ಪ್ರಗತಿ ಸಾಧಿಸುತ್ತಿರುವ ಪುರಸಭೆಯಲ್ಲಿ, ಪಕ್ಷದ ಮೇಯರ್ ಅಭ್ಯರ್ಥಿ ಆರ್. ಶ್ರೀಲೇಖಾ ಅವರು ವಾರ್ಡ್ಗೆ ಮಾತ್ರವಲ್ಲ, ಬಹುಶಃ ಇಡೀ ನಗರದ ನಾಯಕಿಯಾಗುತ್ತಾರೆ ಎಂಬುದು ನಿಸ್ಸಂದೇಹವಲ್ಲ. ಯಾಕೆಂದರೆ ತಿರುವನಂತಪುರಂನ ನೂತನ ಮೇಯರ್ ಆಗುವ ಸಾಲಿನಲ್ಲಿ ಶ್ರೀಲೇಖಾ ಅವರ ಹೆಸರು ಮುಂಚೂಣಿಯಲ್ಲಿದೆ.
ಪೋಸ್ಟರ್ನಲ್ಲಿ ಐಪಿಎಸ್ ಎಂಬ ಬಿರುದನ್ನು ಬಳಸದಂತೆ ನಿಷೇಧಿಸಲ್ಪಟ್ಟ ಶ್ರೀಲೇಖಾ, ತಮ್ಮ ಸೇವಾವಧಿಯಲ್ಲಿ ಮಾಡಿದ ಕೃತ್ಯದ ಹೆಸರಿನಿಂದಲೂ ವಿವಾದವನ್ನು ಎದುರಿಸಿದರು. ಖ್ಯಾತ ನಟಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ ನಟ ದಿಲೀಪ್ ನ್ಯಾಯಾಂಗ ಬಂಧನದಲ್ಲಿದ್ದಾಗ ಶ್ರೀಲೇಖಾ ಜೈಲಿನ ಡಿಜಿಪಿಯಾಗಿದ್ದರು. ದಣಿದ ದಿಲೀಪ್ರನ್ನು ಜೈಲಿಗೆ ಕರೆದೊಯ್ದು ಆಹಾರ ಮತ್ತು ನೀರು ನೀಡಿದ ಶ್ರೀಲೇಖಾ, 'ಆರೋಪಿಗೆ ಅನಗತ್ಯ ಸಹಾಯ' ಮಾಡಿದ್ದಾರೆ ಎಂಬ ಆರೋಪವೂ ಇತ್ತು.
ಆದರೆ 'ತಾನು ಮಾನವೀಯ ನೆರವು ಮಾತ್ರ ನೀಡಿದ್ದೇನೆ ಮತ್ತು ಆರೋಪಿಯೂ ಅದನ್ನೇ ಮಾಡುತ್ತಿದ್ದಾನೆ ಎಂದು ಹೇಳಿ ಸರ್ಮರ್ಥನೆ ಮಾಡಿಕೊಂಡಿದ್ದರು. ಸಾಕಷ್ಟು ಟೀಕೆಗಳ ನಡುವೆಯೂ ತನ್ನ ನಿಲುವಿನಲ್ಲಿ ದೃಢವಾಗಿ ನಿಂತ ಶ್ರೀಲೇಖಾ ಈ ಚುನಾವಣೆಯಲ್ಲಿ ಗೆದ್ದಿದ್ದು ಮತ್ತು ಆ ಪ್ರಕರಣದಲ್ಲಿ ದಿಲೀಪ್ ಖುಲಾಸೆಗೊಂಡಿದ್ದು ಕಾಕತಾಳೀಯ.
ಶ್ರೀಲೇಖಾ ಅವರು 33 ವರ್ಷ ಐದು ತಿಂಗಳು ಸೇವೆ ಸಲ್ಲಿಸಿದ ನಂತರ ಡಿಸೆಂಬರ್ 31, 2020 ರಂದು ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಡಿಜಿಪಿಯಾಗಿ ನಿವೃತ್ತರಾದರು.

