ಮನ್ನಾಡ್: ಕೇರಳದ ಮನ್ನಾಡ್ ಪುರಸಭೆಯ ಒಂದು ವಾರ್ಡ್‌ನಲ್ಲಿ ಎಲ್‌ಡಿಎಫ್ ಅಭ್ಯರ್ಥಿ ಕೇವಲ ಒಂದು ಮತವನ್ನು ಪಡೆದು ಹೀನಾಯ ಸೋಲನ್ನು ಅನುಭವಿಸಿದ್ದಾರೆ.ಕೇರಳದಂತಹ ಎಡಪಂಥೀಯ ಪ್ರಾಬಲ್ಯವುಳ್ಳ ರಾಜ್ಯದಲ್ಲಿ ಎಲ್‌ಡಿಎಫ್ ಅಭ್ಯರ್ಥಿ ಕೇವಲ ಒಂದು ಮತವನ್ನು ಪಡೆದಿರುವುದು ತೀವ್ರ ಮುಖಭಂಗವನ್ನುಂಟು ಮಾಡಿದೆ.
ಮೊದಲ ವಾರ್ಡ್ ಕುಂತಿಪುಳದಲ್ಲಿ ಸ್ಪರ್ಧಿಸಿದ್ದ ಎಲ್‌ಡಿಎಫ್ ಸ್ವತಂತ್ರ ಅಭ್ಯರ್ಥಿ ಫಿರೋಜ್ ಖಾನ್ ಕೇವಲ ಒಂದು ಮತವನ್ನು ಪಡೆದರು. ಫಿರೋಜ್ ಖಾನ್ ಟಿವಿ ಚಿಹ್ನೆಯಡಿಯಲ್ಲಿ ಸ್ಪರ್ಧಿಸಿದ್ದರು. ಈ ವಾರ್ಡ್‌ನಲ್ಲಿ ಎಲ್‌ಡಿಎಳ್ ಅಭ್ಯರ್ಥಿಯನ್ನು ಕೊನೆಯ ಹಂತದಲ್ಲಿ ನಿರ್ಧರಿಸಲಾಗಿತ್ತು. ಹೀಗಾಗಿ ಪ್ರಚಾರಕ್ಕೆ ಸಮಯವೇ ಸಿಗದೆ ಇದು ಕೂಡ ಅವರ ಸೋಲಿಗೆ ಕಾರಣವಾಗಿರಬಹುದು ಎಂದು ಹೇಳಲಾಗ್ತಿದೆ.
ವಾರ್ಡ್‌ನಲ್ಲಿ ಎಲ್‌ಡಿಎಫ್ ಮತ್ತು ವೆಲ್‌ಫೇರ್ ಪಾರ್ಟಿ ನಡುವೆ ಪಿತೂರಿ ನಡೆದಿದೆ ಎಂಬ ಆರೋಪವೂ ಇತ್ತು. ವಾರ್ಡ್‌ನಲ್ಲಿ ವೆಲ್‌ಫೇರ್ ಪಕ್ಷದ ಅಭ್ಯರ್ಥಿ ಸಿದ್ದಿಕ್ ಕುಂತಿಪುಳ 179 ಮತಗಳನ್ನು ಪಡೆದರು. ಸ್ವತಂತ್ರ ಅಭ್ಯರ್ಥಿ 65 ಮತಗಳನ್ನು ಪಡೆದರೆ , ಬಿಜೆಪಿ ಅಭ್ಯರ್ಥಿ 8 ಮತಗಳನ್ನು ಪಡೆದರು. ಯುಡಿಎಫ್‌ನ ಮುಸ್ಲಿಂ ಲೀಗ್ ಅಭ್ಯರ್ಥಿ ಕೆ.ಸಿ. ಅಬ್ದುಲ್ ರೆಹಮಾನ್ 301 ಮತಗಳನ್ನು ಪಡೆಯುವ ಮೂಲಕ ವಾರ್ಡ್‌ನಿಂದ ಗೆದ್ದರು.
ಈತನ್ಮಧ್ಯೆ, ಪಟ್ಟಾಂಬಿ ಪುರಸಭೆಯ 12 ನೇ ವಿಭಾಗದಿಂದ ಉಂಗುರ ಚಿಹ್ನೆಯಡಿಯಲ್ಲಿ ಸ್ಪರ್ಧಿಸಿದ್ದ ಎಲ್‌ಡಿಎಫ್ ಸ್ವತಂತ್ರ ಅಭ್ಯರ್ಥಿ ಅಬ್ದುಲ್ ಕರೀಮ್ ಒಂದೇ ಒಂದು ಮತವನ್ನು ಪಡೆಯಲಿಲ್ಲ. ಎಲ್‌ಡಿಎಫ್ ವೆಲ್‌ಫೇರ್ ಪಾರ್ಟಿ ಮತ್ತು ಯುಡಿಎಫ್ ನಡುವೆ ಪಿತೂರಿ ನಡೆದಿದೆ ಎಂಬ ಆರೋಪವೂ ಇತ್ತು. ಮುಸ್ಲಿಂ ಲೀಗ್ ಅಭ್ಯರ್ಥಿ ಟಿಪಿ ಉಸ್ಮಾನ್ ಇಲ್ಲಿ ಗೆದ್ದರು.
ಎಲ್‌ಡಿಎಫ್ ಅಭ್ಯರ್ಥಿ ಕುಸಿದು ಬಿದ್ದು ಸಾವು!
ತಿರುವನಂತಪುರಂ: ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಯುಡಿಎಫ್ ಅಭ್ಯರ್ಥಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಎಡವಕೋಡ್ ವಾರ್ಡ್‌ನ ಅಭ್ಯರ್ಥಿ ವಿ.ಆರ್. ಸಿನಿ (50) ಅವರು ಕುಸಿದು ಬಿದ್ದು ನಿಧನ ಹೊಂದಿದ್ದು, ಶ್ರೀಕಾರ್ಯಂ ಇಲಂಕುಲಂನಲ್ಲಿರುವ ಅವರ ಕುಟುಂಬದ ಮನೆಯಲ್ಲಿ ಸಿನಿ ಕುಸಿದು ಬಿದ್ದರು. ತಕ್ಷಣ ಅವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ನಿಧನರಾದರು ಎಂದು ವೈದ್ಯರು ಘೋಷಿಸಿದರು.
ವಿ.ಆರ್. ಸಿನಿ ತಿರುವನಂತಪುರಂ ಕಾರ್ಪೊರೇಷನ್‌ನ ಮಾಜಿ ಕೌನ್ಸಿಲರ್ ಆಗಿದ್ದರು. ನಿನ್ನೆ ಚುನಾವಣಾ ಫಲಿತಾಂಶ ಪ್ರಕಟವಾದಾಗ, ಸಿನಿ 26 ಮತಗಳಿಂದ ಸೋತರು. ತಿರುವನಂತಪುರಂ ವೈದ್ಯಕೀಯ ಕಾಲೇಜಿನಿಂದ ಔಷಧಶಾಸ್ತ್ರದಲ್ಲಿ ಪದವಿ ಪಡೆದ ಸಿನಿ, ಒಬ್ಬ ಉದ್ಯಮಿಯಾಗಿದ್ದರು. ಅವರು ತಮ್ಮದೇ ಆದ ಮೆಡಿಕಲ್ ಅನ್ನು ನಡೆಸುತ್ತಿದ್ದರು.

