ಆಧಾರ್‌ನಲ್ಲಿರುವ ಹಳೆ ಫೋಟೋದಿಂದ ಬೇಸರವಾಗಿದ್ದು ನಿಮ್ಮ ಆಧಾರ್ ಕಾರ್ಡ್‌ನಲ್ಲಿ (Aadhaar) ನಿಮ್ಮ ಫೋಟೋವನ್ನು ಬದಲಾಯಿಸಲು ನೀವು ಆನ್‌ಲೈನ್‌ನಲ್ಲಿ ಪ್ರಯತ್ನಿಸುತ್ತಿದ್ದರೆ ಇದಕ್ಕೆ ಮೊದಲು ಒಂದು ಮುಖ್ಯ ವಿಷಯವನ್ನು ತಿಳಿಯಬೇಕು ಭದ್ರತಾ ಕಾರಣದಿಂದಾಗಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಫೋಟೋ ಬದಲಾವಣೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಮಾಡಲು ಅವಕಾಶ ನೀಡುವುದಿಲ್ಲ. ಫೋಟೋ (ಬಯೋಮೆಟ್ರಿಕ್) ಬದಲಾವಣೆಗಾಗಿ ನೀವು ಕಡ್ಡಾಯವಾಗಿ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಲೇಬೇಕು. ಏಕೆಂದರೆ ನಿಮ್ಮ ಗುರುತನ್ನು ಖಚಿತಪಡಿಸಲು ಮತ್ತು ಮೋಸವನ್ನು ತಡೆಯಲು ಕೇಂದ್ರದಲ್ಲಿ ನಿಮ್ಮ ಹೊಸ ಫೋಟೋವನ್ನು ಲೈವ್ ಆಗಿ ತೆಗೆಯಲಾಗುತ್ತದೆ.
Aadhaar ಫೋಟೋ ಬದಲಾವಣೆಗೆ ಅಪಾಯಿಂಟ್ಮೆಂಟ್ ಪಡೆಯಬೇಕು
ಹೌದು, ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾವಣೆಗೆ ಮೊದಲು ಅರ್ಜಿ ಸಲ್ಲಿಸಿ ಅಪಾಯಿಂಟ್ಮೆಂಟ್ ಪಡೆಯಬೇಕು ಅಲ್ಲದೆ ಕೆಲ ಸ್ಥಳಗಳಲ್ಲಿ ಸೇವಾ ಕೇಂದ್ರದಲ್ಲೂ ಲಭ್ಯ ಒಟ್ಟಾರೆಯಾಗಿ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೊದಲು ಸಮಯವನ್ನು ಉಳಿಸಲು ಯುಐಡಿಐಐ (UIDAI) ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸುವುದು ಉತ್ತಮ.
ವೆಬ್‌ಸೈಟ್‌ನಲ್ಲಿ ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರವನ್ನು ಆಯ್ಕೆ ಮಾಡಿ ಬಯೋಮೆಟ್ರಿಕ್ ಅಪ್‌ಡೇಟ್ ಆಯ್ಕೆಯನ್ನು ಆರಿಸಿ. ಇದರ ನಂತರ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ ಅಷ್ಟೇ. ನಿಮ್ಮ ಅಪಾಯಿಂಟ್‌ಮೆಂಟ್ ದಿನದಂದು ನಿಮ್ಮ ಹಳೆಯ ಆಧಾರ್ ಕಾರ್ಡ್‌ನೊಂದಿಗೆ ಕೇಂದ್ರಕ್ಕೆ ಭೇಟಿ ನೀಡಿ. ಫೋಟೋ ಬದಲಾವಣೆಗೆ ಬೇರೆ ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿರುವುದಿಲ್ಲ. ಫೋಟೋ ಬದಲಾವಣೆಗೆ ಕೇವಲ ₹100 ಶುಲ್ಕ ಮತ್ತು ನಿಮ್ಮ ಹಳೆಯ ಆಧಾರ್ ಕಾರ್ಡ್ ಇದ್ದಾರೆ ಸಾಕು.
ಆಧಾರ್ ಲೈವ್ ಫೋಟೋ ಮತ್ತು ಶುಲ್ಕ ಪಾವತಿ:
ಕೇಂದ್ರದ ಸಿಬ್ಬಂದಿ ನಿಮ್ಮ ಫಿಂಗರ್ಪ್ರಿಂಟ್ ಮತ್ತು ಕಣ್ಣಿನ ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಗುರುತನ್ನು ಪರಿಶೀಲಿಸುತ್ತಾರೆ. ಪರಿಶೀಲನೆ ಯಶಸ್ವಿಯಾದ ನಂತರ ಅವರು ತಮ್ಮ ಹೊಸ ಫೋಟೋವನ್ನು ಸ್ಥಳದಲ್ಲೇ ಕ್ಲಿಕ್ ಮಾಡುತ್ತಾರೆ. ಈ ಸೇವೆಗೆ ₹100 ಶುಲ್ಕವನ್ನು ನೀವು ನೀಡಬೇಕಾಗುತ್ತದೆ. ಈ ಶುಲ್ಕ ಪಾವತಿಸಿದ ನಂತರ ನಿಮ್ಮ ಅಪ್‌ಡೇಟ್ ಕೋರಿಕೆಯನ್ನು ದೃಢೀಕರಿಸುವ URN (ಅಪ್‌ಡೇಟ್ ರೀಕ್ಕವೆಸ್ಟ್ ನಂಬರ್) ಇರುವ ರಸೀದಿಯನ್ನು ನಿಮಗೆ ನೀಡಲಾಗುತ್ತದೆ. ಅದನ್ನು ತಪ್ಪದೇ ಸುರಕ್ಷಿತವಾಗಿ ಇಟ್ಟುಕೊಳ್ಳಿ. ಫೋಟೋ ಅಪ್‌ಡೇಟ್ ಆದ ನಂತರ ನೀವು ಯುಐಡಿಐ ವೆಬ್‌ಸೈಟ್‌ನಿಂದ ಹೊಸ ಇ-ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ ಹೊಸ ಫೋಟೋವನ್ನು ಕಾಣಬಹುದು.

