ಕಾಸರಗೋಡು: ಆಲಂಪಾಡಿ ನಿವಾಸಿ ಕೆ.ಎಂ ಕಮರುದ್ದೀನ್ ಎಂಬವರನ್ನು ಕಾಸರಗೋಡು ನೆಲ್ಲಿಕುಂಜೆಯಲ್ಲಿ ಹಾದಿಮಧ್ಯೆ ತಡೆದು ಕೊಲೆಬೆದರಿಕೆಯೊಡ್ಡಿ ಅವರ ವಶದಲ್ಲಿದ್ದ ಒಂದು ಲಕ್ಷಕ್ಕೂ ಹೆಚ್ಚುಮೊತ್ತ ಎಗರಿಸಿರುವ ಬಗ್ಗೆ ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪಿ.ಎಂ ಕಮರುದ್ದೀನ್ ಅವರ ದೂರಿನ ಮೇರೆಗೆ ಅನಸ್ ಸೇರಿದಂತೆ ಮೂರು ಮಂದಿ ವಿರುದ್ಧ ಈ ಕೇಸು. ನೆಲ್ಲಿಕುಂಜೆಯಲ್ಲಿ ನಡೆದುಹೋಗುತ್ತಿರುವ ಮಧ್ಯೆ ತಡೆದ ತಂಡ ಪರ್ಸ್ ಎಗರಿಸಿ ಅದರಲ್ಲಿದ್ದ 2ಸಾವಿರ ರೂ. ಅಪಹರಿಸಿ, ಪರ್ಸಿನಲ್ಲಿದ್ದ ಎಟಿಎಂ ಕಾರ್ಡಿನ ಪಿನ್ ನಂಬರ್ ಪಡೆದು ಅದರಿಂದ 99ಸಾವಿರ ರೂ. ನಗದು ಹಿಂಪಡೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

