ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಇದೇ ಮೊದಲ ಬಾರಿಗೆ ಮೊಗ್ರಾಲ್ಪುತ್ತೂರು ಸರ್ಕಾರಿಹೈಯರ್ ಸೆಕೆಂಡರಿ ಶಾಲೆಯಲ್ಲಿ ಡಿ.29ರಿಂದ 31ರ ವರೆಗೆ ಜರುಗಲಿದ್ದು, ಕಾರ್ಯಕ್ರಮವನ್ನು ಹಸಿರು ಸಂಹಿತೆಯೊಂದಿಗೆ ನಡೆಸುವ ನಿಟ್ಟಿನಲ್ಲಿ ತೆಂಗಿನ ಮಡಲು ಹೆಣೆಯುವ ಸ್ಪರ್ಧೆ ಡಿ.26ರಂದು ಶಾಲಾ ವಠಾರದಲ್ಲಿಜರುಗಲಿದೆ.
ಕಲೋತ್ಸವದ ವೇದಿಕೆ, ಸಭಾಂಗಣ ಸೇರಿದಂತೆ ವಿವಿಧ ಸ್ಥಳದಲ್ಲಿ ಹಸಿರಿನ ತೋರಣದೊಂದಿಗೆ ಅಲಂಕಾರಕ್ಕಾಗಿ ತೆಂಗಿನ ಮಡಲನ್ನು ಬಳಸಲಾಗುವುದು. ಅಲ್ಲದೆ ಕಸದ ಬುಟ್ಟಿಗಳನ್ನುತಯಾರಿಸಿ ಅಲ್ಲಲ್ಲಿ ಇರಿಸಲಾಗುವುದು. ವಿವಿಧ ಮಹಿಳಾ ಸಂಘಟನೆಗಳು ಸ್ಪರ್ಧೆಯಲ್ಲಿಕೈಜೋಡಿಸಲಿದೆ. ಗ್ರೀನ್ ಪ್ರೊಟೋಕಾಲ್ ಸಮಿತಿ ಸ್ಪರ್ಧೆಯನ್ನು ಆಯೋಜಿಸುತ್ತಿದೆ.
ಮೊಗ್ರಾಲ್ ಹಲವು ಮಂದಿ ಕವಿಗಳು, ಕ್ರೀಡಾ ಹಾಗೂ ಕಲಾ ಪ್ರತಿಭೆಗಳ ತವರೂರಾಗಿದ್ದು, 'ಇಶಲ್ ಗ್ರಾಮ'ಎಂದೇ ಪ್ರಸಿದ್ಧಿ ಪಡೆದಿದೆ. ಜಿಲ್ಲಾ ಶಾಲಾ ಕಲೋತ್ಸವ ಅಂಗವಾಗಿ ಈಗಾಗಲೇ ವೇದಿಕೇತರ ಸ್ಪರ್ಧೆಗಳು ಇಲ್ಲಿಪೂರ್ಣಗೊಂಡಿದ್ದು, ಡಿ. 29ರಂದು ಆರಂಭಗೊಳ್ಳುವ ಕಲೋತ್ಸವದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

