ಬದಿಯಡ್ಕ/ಕುಂಬಳೆ: ಕುಂಬ್ಡಾಜೆ ಗ್ರಾಮ ಪಂಚಾಯತಿಯಲ್ಲಿ ಯುಡಿಎಫ್ ನ್ನು ಪರಾಭವಗೊಳಿಸಿ ಬಿಜೆರಪಿ ಅಧಿಕಾರದ ಗದ್ದುಗೆ ವಶಪಡಿಸಿದೆ. ಇಲ್ಲಿ ಬಿಜೆಪಿ 7, ಯುಡಿಎಫ್ 6 ಹಾಗೂ ಸಿಪಿಎಂ 1 ಅಭ್ಯರ್ಥಿ ಜಯಗಳಿಸಿದ್ದಾರೆ.
ಕುಂಬಳೆ ಗ್ರಾ.ಪಂ.ಯಲ್ಲಿ ಯುಡಿಎಫ್ ಅಧಿಕಾರ ಉಳಿಸಿಕೊಂಡಿದೆ. ಯುಡಿಎಫ್ 15, ಲೀಗ್ ಸ್ವತಂತ್ರ 1, ಬಿಜೆಪಿ 5, ಸಿಪಿಐಎಂ 3 ಸ್ಥಾನಗಳನ್ನು ಪಡೆದಿದೆ.
ಪುತ್ತಿಗೆ ಗ್ರಾಮ ಪಂಚಾಯತಿ ಆಡಳಿತ ನಡೆಸುತ್ತಿದ್ದ ಎಲ್.ಡಿ.ಎಫ್. ಹೀನಾಯವಾಗಿ ಸೋಲುಕಂಡಿದೆ. ಇಲ್ಲಿ ಯುಡಿಎಫ್ 7, ಸಿಪಿಎಂ 6, ಬಿಜೆಪಿ 2 ಹಾಗೂ 1 ಬಿಜೆಪಿ ಬಂಡಾಯ ಅಭ್ಯರ್ಥಿ ವಿಜಯಗಳಿಸಿದ್ದಾರೆ.
ಬೆಳ್ಳೂರು ಗ್ರಾಮ ಪಂಚಾಯತಿಯಲ್ಲಿ 6 ಬಿಜೆಪಿ, 4 ಸ್ವತಂತ್ರ, ಯುಡಿಎಫ್ 2, ಎಲ್.ಡಿ.ಎಫ್. 2 ಎಂಬಂತೆ ಗೆಲುವು ಸಾಧಿಸಿದ್ದಾರೆ.
ಎಣ್ಮಕಜೆ ಗ್ರಾಮ ಪಂಚಾಯತಿಯಲ್ಲಿ ಯುಡಿಎಫ್ 8, ಬಿಜೆಪಿ 6, ಎಲ್.ಡಿ.ಎಫ್ 4 ಎಂಬಂತೆ ಜಯಗಳಿಸಿದ್ದಾರೆ. ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿರುವ ಸೋಮಶೇಖರ ಜೆಎಸ್ ಅವರು ಜಿಲ್ಲಾ ಪಂಚಾಯತಿಗೆ ಯುಡಿಎಫ್ ನಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ. ಜೊತೆಗೆ ಬ್ಲಾಕ್ ಪಂಚಾಯತಿಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ವಿದ್ಯಾಕುಮಾರಿ ಪುರುಷೋತ್ತಮ 1400 ಬಹುಮತದಿಂದ ಜಯಗಳಿಸಿದ್ದಾರೆ.
ಮೀಂಜ ಗ್ರಾಮ ಪಂಚಾಯತಿಯಲ್ಲಿ 9 ಯು.ಡಿ.ಎಫ್, 7 ಬಿಜೆಪಿ ಹಾಗೂ 1 ಎಲ್.ಡಿ.ಎಫ್. ಸ್ಥಾನಾರ್ಥಿಗಳು ಜಯ ಗಳಿಸಿದ್ದಾರೆ.


