ಬದಿಯಡ್ಕ: ಸ್ಥಳೀಯಾಡಳಿತ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು ಬದಿಯಡ್ಕ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಹಾಗೂ ಯುಡಿಎಫ್ ಸಮಬಲದೊಂದಿಗೆ ಆಡಳಿತ ಚುಕ್ಕಾಣಿಯನ್ನು ಅತಂತ್ರಗೊಳಿಸಿದೆ. ಒಟ್ಟು 21 ಸ್ಥಾನಗಳ ಪೈಕಿ ಬಿಜೆಪಿ 10, ಯುಡಿಎಫ್ 10 ಹಾಗೂ ಎಲ್.ಡಿ.ಎಫ್ ಒಂದು ಸ್ಥಾನ ಪಡೆದುಕೊಂಡಿದೆ.
ಪಂಚಾಯತಿಯ 1 ಮಜೀರ್ಪಳ್ಳ(1), ಕಿಳಿಂಗಾರ್(2), ನೀರ್ಚಾಲು(3), ಕಾಡಮನೆ(6), ಮೆಡಿಕಲ್ ಕಾಲೇಜು(8), ಚಾಲಕ್ಕೋಡಿ(9), ವಿದ್ಯಾಗಿರಿ(10), ಪೆರಡಾಲ(13), ಪುದುಕೋಳಿ(18), ತಲ್ಪನಾಜೆ(19)ಎಂಬಂತೆ ವಾರ್ಡ್ ಗಳಲ್ಲಿ ಬಿಜೆಪಿ ಜಯಗಳಿಸಿದೆ.
ಮೂಕಂಪಾರೆ(5), ಪಳ್ಳತ್ತಡ್ಕ(7), ಬಾರಡ್ಕ(11), ಬದಿಯಡ್ಕ(12), ಕನ್ನೆಪ್ಪಾಡಿ(14), ಚೇಡೇಕಲ್(15), ಚರ್ಲಡ್ಕ(16), ಮಾನ್ಯ(17), ಬೇಳ(20), ಸೀತಾಂಗೋಳಿ(21) ಎಂಬ ವಾರ್ಡ್‍ಗಳಲಲಿ ಯುಡಿಎಫ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ವಾರ್ಡ್ ಸಂಖ್ಯೆ 4ರ ದೇವರಮೆಟ್ಟಲ್ಲಿ ಎಲ್.ಡಿ.ಎಫ್ ಅಭ್ಯರ್ಥಿ ಜಯಗಳಿಸಿದ್ದಾರೆ.
ಪಂಚಾಯತಿಯ 21 ಸದಸ್ಯ ಸ್ಥಾನಗಳ ಪೈಕಿ ಬಿಜೆಪಿ ಹಾಗೂ ಯುಡಿಎಫ್ ತಲಾ 10 ಸ್ಥಾನಗಳನ್ನು ಪಡೆದಿದ್ದು, ಆಡಳಿತ ಚುಕ್ಕಾಣಿ ಹಿಡಿಯಲು ಕನಿಷ್ಠ 11 ಸ್ಥಾನಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಯಾರ ಕೈಸೇರಲಿದೆ ಎಂಬುದು ಕುತೂಹಲ ಮೂಡಿಸಿದೆ. ಪಕ್ಷಗಳು ಚರ್ಚೆಯಲ್ಲಿ ತೊಡಗಿಕೊಂಡಿದೆ.



