ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿಯಲ್ಲಿ ಉಪಯೋಗ ಶೂನ್ಯ ಕೆಂಗಲ್ಲು ಕ್ವಾರೆಯಲ್ಲಿ ಶುಕ್ರವಾರ ಕಾಸರಗೋಡು ಬಾಂಬ್ ಸ್ಕ್ಯಾಡ್ ದಳದವರು ಸ್ಪೊಟ ನಡೆಸಿದರು.
ಜಿಲ್ಲೆಯ ವಿವಿಧೆಡೆ ಇತ್ತೀಚೆಗೆ ವಶಕ್ಕೆ ಪಡೆದಿದ್ದ ಸ್ಪೋಟಕಗಳನ್ನು ಶುಕ್ರವಾರ ಸ್ಪೋಟಿಸುವ ಮೂಲಕ ನಿಷ್ಕ್ರಿಯಗೊಳಿಸಲಾಯಿತು. ಗ್ರಾಮೀಣ ಪ್ರದೇಶವಾಗಿರುವ ಇಲ್ಲಿ ಮಧ್ಯಾಹ್ನ 12.45ರ ವೇಳೆಗೆ ಭಾರೀ ಸ್ಪೋಟದ ಶಬ್ದ ಪರಿಸರವನ್ನು ತಲ್ಲಣಗೊಳಿಸಿತು. ಬಳಿಕ ದೌಡಾಯಿಸಿದ ಸ್ಥಳೀಯರು ಪೋಲೀಸರನ್ನು ಕಂಡು ಮತ್ತಷ್ಟು ಕಂಗಾಲಾದರು. ಬಳಿಕ ವಿಚಾರಿಸಿದಾಗ ವಶಪಡಿಸಿಕೊಂಡಿದ್ದ ಸ್ಪೋಟಕಗಳನ್ನು ಪೋಲೀಸ್ ನಿಯಮಾನುಸಾರ ನಿಷ್ಕ್ರಿಯಗೊಳಿಸಲಿರುವ ಕಾರ್ಯಾಚರಣೆ ಎಂದು ತಿಳಿದುಬಂತು. ಕಾರ್ಯಾಚರಣೆಯಲ್ಲಿ ಐದು ಬೃಹತ್ ಸ್ಪೋಟಕಗಳನ್ನು ಡಿನೋಮೀಟರ್ ಸಹಿತ ವಸ್ತುಗಳಿಂದ ನಿಷ್ಕ್ರಿಯಗೊಳಿಸಲಾಗಿದೆ.
ತಂಡದಲ್ಲಿ ಬದಿಯಡ್ಕ ಸಿ.ಐ. ಸಂತೋಷ್ ಕುಮಾರ್ ಎ., ಎಸ್.ಐ.ರೂಪೇಶ್, ಎ.ಎಸ್.ಐ.ರಂಜಿತ್, ಬಾಂಬ್ ಸ್ಕ್ಯಾಡ್ ದಳದ ಎಸ್.ಐ.ಪ್ರದೀಶ್ ಗೋಪಾಲ್, ಪೋಲೀಸರಾದ ಗೋಕುಲ್, ಭಾಸ್ಕರನ್, ಶ್ರೀನೇಶ್, ಬಾಂಬ್ ನಿಷ್ಕ್ರಿಯ ದಳದ ವಿನೀತ್, ಅನೂಪ್ ಮೊದಲಾದವರು ನೇತೃತ್ವ ವಹಿಸಿದ್ದರು.

-side.jpg)
