ಕಾಸರಗೋಡು: ಕುಂಬಳೆ ಆರಿಕ್ಕಾಡಿ ಟೋಲ್ ಪ್ಲಾಜಾಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಯ ಚೇಂಬರ್‌ನಲ್ಲಿ ಚರ್ಚೆಗೆ ತಲುಪಿದ ಜನಪ್ರತಿನಿಧಿಗಳನ್ನು ಆಕ್ಷೇಪಿಸಿ ರುವುದಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ಧಿ ಅಸತ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಟೋಲ್ ಪ್ಲಾಜಾ ವಿಷಯ ನ್ಯಾಯಾಲಯದಲ್ಲಿ ಪರಿಗಣನೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದು. ಈ ಬಗ್ಗೆ ಔದ್ಯೋಗಿಕವಾದ ಸಭೆ ಈ ತಿಂಗಳ 22ರಂದು ಕಲೆಕ್ಟ್ರೇಟ್‌ನಲ್ಲಿ ನಡೆಸಲಾಗಿಲ್ಲ. ಆದರೆ ಚೇಂಬರ್‌ಗೆ ತಲುಪಿ ಜಿಲ್ಲಾಧಿಕಾರಿಯವರನ್ನು ನೇರವಾಗಿ ಭೇಟಿಯಾದ ಜನಪ್ರತಿನಿಧಿ ಗಳಲ್ಲಿ, ರಾಜಕೀಯ ಪಕ್ಷದವರಲ್ಲಿ ನ್ಯಾಯಾಲ ಯದ ಆದೇಶ ಪ್ರಕಾರ ಕ್ರಮ ಸ್ವೀಕರಿಸುವುದಾಗಿ ತಿಳಿಸಿರುವೆನೆಂದು, ಈಗ ಪ್ರಚಾರದಲ್ಲಿರುವ ಸುದ್ಧಿಗಳು ಆಧಾರರ ಹಿತವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಗಳಲ್ಲಿ ತಪ್ಪಾದ ಪ್ರಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಸೂಚಿಸಿದ್ದಾರೆ.


