ಕಾಸರಗೋಡು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ನೂರನೇ ವಾರ್ಷಿಕ ಅಂತಾರಾಷ್ಟ್ರೀಯ ಮಹಾಸಮ್ಮೇಳನದ ಅಂಗವಾಗಿ ಕಾಸರಗೋಡು ಕುಣಿಯದಲ್ಲಿ ನಿರ್ಮಿಸಲಾಗುತ್ತಿರುವ ವಿಶಾಲವಾದ ಚಪ್ಪರ ನಿರ್ಮಾಣಕ್ಕಿರುವ ಶಿಲಾನ್ಯಾಸವನ್ನು ಸಮಸ್ತ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ನೆರವೇರಿಸಿದರು.
ಈ ಮೂಲಕ 2026ರ ಫೆಬ್ರವರಿ 4ರಿಂದ 8ರವರೆಗೆ ನಡೆಯುವ ಐತಿಹಾಸಿಕ ಮಹಾಸಮ್ಮೇಳನದ ಸಿದ್ಧತಾ ಕಾರ್ಯಗಳ ಅಂಗವಾಗಿ ಚಪ್ಪರ ನಿರ್ಮಾಣಕ್ಕೆ ಚಾಲನೆ ದೊರೆಯಿತು
ಕುಣಿಯದ ವರಕ್ಕಲ್ ಮುಲ್ಲಕ್ಕೋಯ ತಂಙಳ್ ನಗರದಲ್ಲಿ ನಿರ್ಮಾಣವಾಗುತ್ತಿರುವ ವಿಶಾಲ ಚಪ್ಪರದಲ್ಲಿ 33,313 ಶಿಬಿರಾರ್ಥಿಗಳಿಗೆ ವಸತಿ ಹಾಗೂ ಶಿಬಿರ ವೀಕ್ಷಣೆಯ ವ್ಯವಸ್ಥೆಯಿರಲಿದೆ.
ಸಮಾರಂಭದಲ್ಲಿ ಸಮಸ್ತ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಜನರಲ್ ಮ್ಯಾನೇಜರ್ ಕೆ. ಮೊಯೀನುಕುಟ್ಟಿ ಮಾಸ್ಟರ್ ಪ್ರಾಸ್ತಾವಿಕ ಭಾಷಣ ನಿರ್ವಹಿಸಿದರು. ಕೆ. ಉಮರ್ ಫೈಝಿ ಮುಕ್ಕಂ, ಎ.ವಿ. ಅಬ್ದುರಹ್ಮಾನ್ ಮುಸ್ಲಿಯಾರ್, ಬಿ.ಕೆ. ಅಬ್ದುಲ್ ಖಾದಿರ್ ಮುಸ್ಲಿಯಾರ್ ಬಂಬ್ರಾಣ, ಉಸ್ಮಾನ್ ಫೈಝಿ ತೋಡಾರು, ಶಾಸಕ ಎನ್.ಎ. ನೆಲ್ಲಿಕ್ಕುನ್ನು, ಎಂ.ಎಸ್. ತಂಙಳ್ ಮದನಿ, ಟಿಪಿಸಿ ತಂಙಳ್, ಶುಹೈಬ್ ತಂಙಳ್, ಇಸ್ಮಾಯಿಲ್‍ಕುಞÂ ಹಾಜಿ, ಚೆಂಗಳ ಅಬ್ದುಲ್ಲಾ ಫೈಝಿ ಸೇರಿದಂತೆ ಹಲವು ಮಂದಿಉಲಮಾ ಮತ್ತು ಗಣ್ಯರು ಪಾಲ್ಗೊಂಡಿದ್ದರು.
ಕುಣಿಯದಲ್ಲಿ ನಡೆಯಲಿರುವ ಸಮಸ್ತ ನೂರನೇ ವಾರ್ಷಿಕ ಅಂತಾರಾಷ್ಟ್ರೀಯ ಮಹಾಸಮ್ಮೇಳನವು ಜಾಗತಿಕವಾಗಿ ಗಮನ ಸೆಳೆಯುವ ಭವ್ಯ ಸಂಗಮವಾಗಲಿದೆ ಎಂದು ಸಮಸ್ತ ನೇತಾರರು ತಿಳಿಸಿದ್ದಾರೆ. ಅಬ್ದುಸ್ಸಲಾಂ ದಾರಿಮಿ ಆಲಂಪಾಡಿ ಸ್ವಾಗತಿಸಿದರು.


