HEALTH TIPS

ದೇಶದಲ್ಲಿ ನಡೆಸಿದ 'ಮಿದುಳು ಸ್ಟೆಂಟ್‌'ನ ಮೊದಲ ಕ್ಲಿನಿಕಲ್‌ ಟ್ರಯಲ್ ಯಶಸ್ವಿ

ನವದೆಹಲಿ: ತೀವ್ರ ಸ್ವರೂಪದ ಪಾರ್ಶ್ವವಾಯು ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ 'ಮಿದುಳು ಸ್ಟೆಂಟ್'ನ ಕ್ಲಿನಿಕಲ್‌ ಟ್ರಯಲ್‌ಅನ್ನು ಯಶಸ್ವಿಯಾಗಿ ನಡೆಸುವ ಮೂಲಕ ದೆಹಲಿಯ ಅಖಿಲ ಭಾರತ ವೈದ್ಯವಿಜ್ಞಾನಗಳ ಸಂಸ್ಥೆ (ಎಐಐಎಂಎಸ್‌) ವೈದ್ಯರು ಗಮನ ಸೆಳೆದಿದ್ದಾರೆ.

ಇದು, ದೇಶದಲ್ಲಿ ನಡೆಸಿದ 'ಮಿದುಳು ಸ್ಟೆಂಟ್'ನ ಮೊದಲ ಕ್ಲಿನಿಕಲ್ ಟ್ರಯಲ್‌ ಆಗಿದೆ.

ಈ ಸ್ಟೆಂಟ್‌ ಸುರಕ್ಷಿತ ಹಾಗೂ ಪಾರ್ಶ್ವವಾಯು ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂಬುದು ಟ್ರಯಲ್‌ನಿಂದ ದೃಢಪಟ್ಟಿದೆ ಎಂದು ಸಂಸ್ಥೆಯ ನ್ಯೂರೊ ಇಮೇಜಿಂಗ್‌ ವಿಭಾಗದ ಮುಖ್ಯಸ್ಥ ಡಾ.ಶೈಲೇಶ್ ಬಿ.ಗಾಯಕ್ವಾಡ್‌ ತಿಳಿಸಿದ್ದಾರೆ.

ಈ ಟ್ರಯಲ್‌ನ ಫಲಿತಾಂಶವು 'ಜರ್ನಲ್‌ ಆಫ್‌ ನ್ಯೂರೊಇಂಟರ್‌ವೆನ್‌ಷನಲ್ ಸರ್ಜರಿ' ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. 'ಸೂಪರ್‌ನೊವಾ ಸ್ಟೆಂಟ್‌' ಎಂದು ಕರೆಯಲಾಗುವ ಇದನ್ನು ಗ್ರ್ಯಾವಿಟಿ ಮೆಡಿಕಲ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries