HEALTH TIPS

Pak PMರನ್ನು 40 ನಿಮಿಷ ಕಾಯಿಸಿದ ಪುಟಿನ್‌; ಹತಾಶರಾಗಿ ಸಭೆಗೆ ನುಗ್ಗಿದ ಶಹಬಾಜ್‌ ಷರೀಫ್

ಇಸ್ತಾಂಬುಲ್‌: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರನ್ನು ಭೇಟಿ ಮಾಡಲು ನಿಗದಿತ ವೇಳೆಗೆ ಆಗಮಿಸಿದ್ದ ಪಾಕಿಸ್ತಾನದ ಪ್ರಧಾನಿ ಶಹಬಾಜ್‌ ಷರೀಫ್‌ ಅವರಿಗೆ, ಸುಮಾರು 40 ನಿಮಿಷಕ್ಕೂ ಹೆಚ್ಚು ಕಾಲ ಹೊರಗಡೆ ನಿಲ್ಲಬೇಕಾದ ಪರಿಸ್ಥಿತಿ ಎದುರಾದ ಬಳಿಕ, ಅವರು ಹತಾಶರಾಗಿ ನಡೆಯುತ್ತಿದ್ದ ಸಭೆಯೊಳಗೆ ನೇರವಾಗಿ ಪ್ರವೇಶಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ತುರ್ಕಮೆನಿಸ್ತಾನದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ರಷ್ಯಾ, ಪಾಕಿಸ್ತಾನ, ಟರ್ಕಿ, ಇರಾನ್‌ ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪುಟಿನ್-ಷರೀಫ್‌ ದ್ವಿಪಕ್ಷೀಯ ಮಾತುಕತೆಗೆ ಸಮಯ ನಿಗದಿಯಾಗಿತ್ತು.

ಆದರೆ ಆ ವೇಳೆಗೆ ಪುಟಿನ್‌ ಅವರು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರೊಂದಿಗೆ ಚರ್ಚೆ ಮುಂದುವರಿಸಿಕೊಂಡಿದ್ದರಿಂದ, ಷರೀಫ್‌ಗೆ ಸಭಾಂಗಣಕ್ಕೆ ಪ್ರವೇಶ ಸಿಗದೆ ಹೊರಗಡೆ ಕಾಯಬೇಕಾಯಿತು. 40 ನಿಮಿಷ ದಾಟಿದರೂ ಕೂಡ ಸಭೆಯಿಂದ ಯಾವುದೇ ಸೂಚನೆ ಇಲ್ಲದಿರುವುದು ಪಾಕ್ ಪ್ರಧಾನಿಯ ಅಸಮಾಧಾನಕ್ಕೆ ಕಾರಣವಾಯಿತು.

ಇದರಿಂದ ಬೇಸತ್ತ ಶಹಬಾಜ್‌ ಷರೀಫ್‌, ಅಂತಿಮವಾಗಿ ಅನುಮತಿಯಿಲ್ಲದೇ ಪುಟಿನ್-ಎರ್ಡೋಗನ್‌ ನಡೆಸುತ್ತಿದ್ದ ಮುಚ್ಚಿದ ಸಭಾ ಕೋಣೆಗೆ ನೇರವಾಗಿ ನುಗ್ಗಿದರು. ಕೇವಲ 10 ನಿಮಿಷದ ಬಳಿಕವೇ ಅವರು ಹೊರಬಂದಿದ್ದು, ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries