HEALTH TIPS

ಕ್ರಿಸ್‌ಮಸ್ ಸಂದೇಶ | ಗಾಝಾದಲ್ಲಿ ಫೆಲೆಸ್ತೀನಿಗಳ ದುಃಸ್ಥಿತಿಯನ್ನು ಖಂಡಿಸಿದ ಪೋಪ್ ಲಿಯೊ

ವ್ಯಾಟಿಕನ್: ಪೋಪ್ ಲಿಯೊ ಅವರು ತನ್ನ ಕ್ರಿಸ್‌ಮಸ್ ಸಂದೇಶದಲ್ಲಿ ಫೆಲೆಸ್ತೀನಿಗಳು ಮೈಕೊರೆಯುವ ಚಳಿಯಲ್ಲಿ ಜರ್ಜರಿತ ಡೇರೆಗಳಲ್ಲಿ ವಾಸವಾಗಿರುವ ಗಾಝಾದಲ್ಲಿನ ಪರಿಸ್ಥಿತಿಯನ್ನು ಖಂಡಿಸಿದ್ದಾರೆ.

ಮೊದಲ ಅಮೆರಿಕನ್ ಪೋಪ್ ಆಗಿರುವ ಲಿಯೊ,'ಯೇಸುಕ್ರಿಸ್ತನು ಗೋದಲಿಯಲ್ಲಿ ಜನಿಸಿದ್ದ ಕಥೆಯು ದೇವರು ಜಗತ್ತಿನ ಜನರ ನಡುವೆ ತನ್ನ 'ದುರ್ಬಲವಾದ ಡೇರೆ ಹಾಕಿದ್ದಾನೆ' ಎನ್ನುವುದನ್ನು ತೋರಿಸುತ್ತದೆ ಹಾಗಾದರೆ, ವಾರಗಳಿಂದಲೂ ಮಳೆ, ಗಾಳಿ ಮತ್ತು ಚಳಿಗೆ ಒಡ್ಡಿಕೊಂಡಿರುವ ಡೇರೆಗಳ ಬಗ್ಗೆ ನಾವು ಯೋಚಿಸುವುದು ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದರು.

ದಿವಂಗತ ಪೋಪ್ ಅವರ ಉತ್ತರಾಧಿಕಾರಿಯಾಗಿ ಕಳೆದ ಮೇ ತಿಂಗಳಿನಲ್ಲಿ ಆಯ್ಕೆಯಾದ ಬಳಿಕ ತನ್ನ ಮೊದಲ ಕ್ರಿಸ್‌ಮಸ್ ಆಚರಿಸುತ್ತಿರುವ ಪೋಪ್ ಲಿಯೊ ತನ್ನ ಪೂರ್ವಾಧಿಕಾರಿಗಿಂತ ಶಾಂತ, ಹೆಚ್ಚು ರಾಜತಾಂತ್ರಿಕ ಶೈಲಿಯನ್ನು ಹೊಂದಿದ್ದು,ಸಾಮಾನ್ಯವಾಗಿ ತನ್ನ ಧರ್ಮೋಪದೇಶಗಳಲ್ಲಿ ರಾಜಕೀಯ ಉಲ್ಲೇಖಗಳಿಂದ ದೂರವಿರುತ್ತಾರೆ.

ಆದರೆ ಅವರು ಗಾಝಾದಲ್ಲಿ ಫೆಲೆಸ್ತೀನಿಗಳ ದುಃಸ್ಥಿತಿಯ ಬಗ್ಗೆ ಹಲವಾರು ಸಲ ವಿಷಾದವನ್ನು ವ್ಯಕ್ತಪಡಿಸಿದ್ದು, ಇಸ್ರೇಲ್‌ನೊಂದಿಗೆ ದಶಕಗಳ ಸಂಘರ್ಷಕ್ಕೆ ಪರಿಹಾರವು ಫೆಲೆಸ್ತೀನಿ ರಾಷ್ಟ್ರವನ್ನು ಒಳಗೊಂಡಿರಲೇಬೇಕು ಎಂದು ಕಳೆದ ತಿಂಗಳು ಹೇಳಿದ್ದರು.

ಎರಡು ವರ್ಷಗಳ ತೀವ್ರ ಬಾಂಬ್ ದಾಳಿಗಳು ಮತ್ತು ಮಿಲಿಟರಿ ಕಾರ್ಯಾಚರಣೆಗಳ ಬಳಿಕ ಇಸ್ರೇಲ್ ಮತ್ತು ಹಮಾಸ್ ಕಳೆದ ಅಕ್ಟೋಬರ್‌ ನಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಆದರೆ 20 ಲಕ್ಷಕ್ಕೂ ಅಧಿಕ ಜನರು ನಿರ್ವಸಿತರಾಗಿರುವ ಗಾಝಾಕ್ಕೆ ಈಗಲೂ ಅತ್ಯಲ್ಪ ಪ್ರಮಾಣದಲ್ಲಿ ನೆರವು ಪೂರೈಕೆಯಾಗುತ್ತಿದೆ ಎಂದು ಮಾನವೀಯ ನೆರವು ಸಂಸ್ಥೆಗಳು ಪ್ರತಿಪಾದಿಸಿವೆ.

ಗುರುವಾರ ವ್ಯಾಟಿಕನ್‌ ನ ಸೈಂಟ್ ಪೀಟರ್ಸ್ ಬ್ಯಾಸಿಲಿಕಾದಲ್ಲಿ ಸಾವಿರಾರು ಜನರು ನೆರೆದಿದ್ದ ಸಂದರ್ಭ ತನ್ನ ಧರ್ಮೋಪದೇಶದಲ್ಲಿ ಪೋಪ್ ಲಿಯೊ, ಜಗತ್ತಿನಾದ್ಯಂತ ನಿರ್ವಸಿತರ ಸ್ಥಿತಿಗಳು ಮತ್ತು ಯುದ್ಧಗಳಿಂದ ಆಗುತ್ತಿರುವ ವಿನಾಶದ ಬಗ್ಗೆಯೂ ವಿಷಾದಿಸಿದರು.

ಜರ್ಜರಿತವಾಗಿರುವುದು ಈಗಲೂ ನಡೆಯುತ್ತಿರುವ ಅಥವಾ ಮುಕ್ತಾಯಗೊಂಡಿರುವ ಅಷ್ಟೊಂದು ಯುದ್ಧಗಳ ಬಿಸಿಯನ್ನು ಅನುಭವಿಸಿರುವ ರಕ್ಷಣೆಯೇ ಇಲ್ಲದ ಜನರು. ಈ ಯುದ್ಧಗಳು ಅವಶೇಷಗಳು ಮತ್ತು ಮಾಯದ ಗಾಯಗಳನ್ನು ಉಳಿಸಿ ಹೋಗಿವೆ. ಜರ್ಜರಿತವಾಗಿರುವುದು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಲ್ಪಟ್ಟಿರುವ ಯುವಜನರ ಮನಸ್ಸುಗಳು ಮತ್ತು ಬದುಕುಗಳು,ಅವರು ಮುಂಚೂಣಿಯಲ್ಲಿದ್ದಾಗ ತಮ್ಮಿಂದ ಅಪೇಕ್ಷಿಸಲ್ಪಟ್ಟಿದ್ದರ ಮತ್ತು ತಮ್ಮನ್ನು ಸಾವಿನ ದವಡೆಗೆ ತಳ್ಳಿರುವವರ ಸುಳ್ಳುಗಳಿಂದ ತುಂಬಿದ ಭಾಷಣಗಳ ಅರ್ಥಹೀನತೆಯನ್ನು ಅನುಭವಿಸುತ್ತಾರೆ ಎಂದು ಪೋಪ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries