ಮಂಜೇಶ್ವರ: 110 ಕೆವಿ ಕೊಣಾಜೆ-ಮಂಜೇಶ್ವರ ಫೀಡರ್‍ನ ಸಾಮಥ್ರ್ಯವನ್ನು ಹೆಚ್ಚಿಸುವ ಭಾಗವಾಗಿ ಡಿಸೆಂಬರ್ 15 ರಿಂದ ಜನವರಿ 5 ರವರೆಗೆ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಕಾಮಗಾರಿ ನಿರ್ವಹಣೆಗಾಗಿ 110 ಕೆವಿ ಸಬ್‍ಸ್ಟೇಷನ್‍ಗಳಾದ ವಿದ್ಯಾನಗರ, ಮುಳ್ಳೇರಿಯ, ಕುಬಣೂರು, ಮಂಜೇಶ್ವರ ಮತ್ತು 33 ಕೆವಿ ಸಬ್‍ಸ್ಟೇಷನ್‍ಗಳಿಂದ ವಿದ್ಯುತ್ ಸರಬರಾಜಿನಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ವ್ಯತ್ಯಯವಾಗಲಿದೆ ಎಂದು ಮೈಲಾಟ್ಟಿ ಲೈನ್ ನಿರ್ವಹಣೆ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

