ಮಧೂರು: ರಾಜ್ಯದ ಉತ್ತರ ಭಾಗದಲ್ಲಿ ಬಿಜೆಪಿ ಆಡಳಿತ ಸತತವಾಗಿ 46ನೇ ವರ್ಷಕ್ಕೆ ಕಾಲಿಡುತ್ತಿರುವಾಗ ರಾಜ್ಯದ ತೆಂಕಣ ಜಿಲ್ಲೆ ರಾಜಧಾನಿಯಾದ ತಿರುವನಂತಪುರ ಕಾರ್ಪೋರೇಶನ್ ನ್ನು ಸ್ವಾಧೀನಪಡಿಸಿದ ಬಿಜೆಪಿಯ ಶಕ್ತಿ ಹೆಚ್ಚುತ್ತಿದೆಯೆಂದು ಪಕ್ಷದ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸತತವಾಗಿ 46ನೇ ವರ್ಷಕ್ಕೆ ಆಡಳಿತ ನಡೆಸಲು ಅವಕಾಶ ಲಭಿಸಿದ ಮಧೂರು ಪಂಚಾಯತಿ ಬಿಜೆಪಿ ಸಮಿತಿಗಳ ಜಂಟಿ ಆಶ್ರಯದಲ್ಲಿ ಭಾನುವಾರ ಸಂಜೆ ನಡೆದ ಹರ್ಷಾಚರಣೆ ಹಾಗೂ ಸಾರ್ವಜನಿಕ ಸಭೆಯನ್ನು ಮಧೂರಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕೋಮು ಭೀತಿವಾದಿ ಸಂಘಟನೆಗಳ ಜೊತೆ ಸೇರಿಸಿಕೊಂಡು ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಾಧನೆ ಮಾಡಲಿರುವ ಯುಡಿಎಫ್‍ನ ಯತ್ನ ಮಧೂರಿನಲ್ಲಿ ಪರಾಭವಗೊಂಡಿದೆ ಎಂದು ಅವರು ನುಡಿದರು.
ಬಿಜೆಪಿ ಮಧೂರು ಪಂ.ಪೂರ್ವ ವಲಯ ಸಮಿತಿ ಅಧ್ಯಕ್ಷ ರವಿ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಉಪಾಧ್ಯಕ್ಷ ಪಿ. ರಮೇಶ್, ಜಿಲ್ಲಾ ಸೆಲ್ ಕೋ-ಆರ್ಡಿನೇಟರ್ ಸುಕುಮಾರ್ ಕುದ್ರೆಪ್ಪಾಡಿ, ಕೆ. ಗೋಪಾಲಕೃಷ್ಣ, ಪೂರ್ವ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಧನಂಜಯನ್ ಮಧೂರು, ಪಶ್ಚಿಮ ವಲಯ ಸಮಿತಿ ಅಧ್ಯಕ್ಷ ಮಾಧವ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಮೀಪುಗುರಿ ಮಾತನಾಡಿದರು.
ಸೂರ್ಲು ಶ್ರೀ ಗಣೇಶ ಭಜನಾ ಮಂದಿರ ಪರಿಸರದಿಂದ ಆರಂಭಗೊಂಡ ವಿಜಯೋತ್ಸವ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ನೇತೃತ್ವ ವಹಿಸಿದ್ದು ಮಧೂರು ಕ್ಷೇತ್ರದ ಬಳಿಯಲ್ಲಿ ಸಮಾಪ್ತಿಗೊಂಡಿತು.

.jpg)
.jpg)
