ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆಗೆ ನಡೆದ ಚುನಾವಣೆ ಸಂದರ್ಭ ನಕಲಿ ಮತದಾನಕ್ಕೆ ಯತ್ನಿಸಿದ ವ್ಯಕ್ತಿಯನ್ನು ಸೆರೆಹಿಡಿದು ಪೊಲಿಸರಿಗೊಪ್ಪಿಸಲಾಗಿದೆ. ಪುತ್ತಿಗೆ ಮಂಗಲಡ್ಕ ನಿವಾಸಿ, ಸಿಪಿಎಂ ಬೆಂಬಲಿಗ ಸಹಾದ್ ಸೆರೆಯಾದ ವ್ಯಕ್ತಿ.
ಪುತ್ತಿಗೆ ಪಂಚಾಯಿತಿ ಒಂದನೇ ವಾರ್ಡು ಚೆನ್ನಿಕ್ಕೋಡಿಯ ಮತದಾನ ಧರ್ಮತ್ತಡ್ಕ ಶಾಲೆಯಲ್ಲಿ ನಡೆಯುತ್ತಿರುವ ಮಧ್ಯೆ ಕೊನೆ ಹಂತದಲ್ಲಿ ಆಗಮಿಸಿದ ಸಹಾದ್ ಬೇರೊಬ್ಬರ ಗುರುತಿನ ಚೀಟಿಯೊಂದಿಗೆ ಮತದಾನಕ್ಕೆ ಆಗಮಿಸಿದ್ದು, ಇದನ್ನು ಮತಗಟ್ಟೆಯಲ್ಲಿ ಕುಳಿತಿದ್ದ ಬಿಜೆಪಿ ಏಜೆಂಟ್ ಸಂಶಯ ವ್ಯಕ್ತಪಡಿಸಿದ್ದರು. ತಕ್ಷಣ ಸಹಾದ್‍ನನ್ನು ತಡೆದುನಿಲ್ಲಿಸಿದ ಅಧಿಕಾರಿಗಳು, ನಡೆಸಿದ ತಪಾಸಣೆಯಿಂದ ಈತ ಯಥಾರ್ಥ ಮತದಾರನಲ್ಲವೆಂದು ಪತ್ತೆಯಾಗಿತ್ತು. ಮತಗಟ್ಟೆಯ ಪ್ರಿಸೈಡಿಂಗ್ ಅಧಿಕಾರಿ ನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡಿದ್ದರು.

