ಉಪ್ಪಳ: ಮೂರು ತಿಂಗಳ ಎಳೆಯ ಮಗುವಿನ ತಾಯಿಯ ಮೃತದೇಹ ಪತಿ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಪ್ಪಳ ಸೋಂಕಾಲಿನ ಕೊಡಂಗೆ ರಸ್ತೆ ನಿವಾಸಿ ಮೊಯ್ದೀನ್ ಸವಾದ್ ಎಂಬವರ ಪತ್ನಿ ಫಾತಿಮತ್ ನಬ್ಸೀನಾ (25)ಮೃತಪಟ್ಟವರು.
ಮನೆಯ ಬೆಡ್‍ರೂಮ್ ಕಿಟಿಕಿ ಸರಳಿಗೆ ನೇಣು ಬಿಗಿದು ನೇತಾಡುತ್ತಿದ್ದ ಫಾತಿಮತ್ ಸಬ್ಸೀನಾ ಅವರನ್ನು ತಕ್ಷಣ ನೇಣಿನಿಮದ ಕೆಳಗಿಳಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರುನಡೆಸಲಾಯಿತು. ಮಂಜೇಶ್ವರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


