ಬದಿಯಡ್ಕ: ಜಿಲ್ಲೆಯ ಜನಪ್ರಿಯ ಕಬಡ್ಡಿ-ವಾಲಿಬಾಲ್ ಆಟಗಾರ ಪೈಕ ಮೂಲಡ್ಕ ನಿವಾಸಿ, ದಿ. ಕೆ. ಜಿ. ಕೋರನ್ -ಪ್ರೇಮಲತಾ ದಂಪತಿ ಪುತ್ರ ರವಿ ಕಿರಣ್ (54)ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಗುರುವಾರ ಮನೆಯಲ್ಲಿ ಕುಸಿದುಬಿದ್ದ ಇವರನ್ನು ತಕ್ಷಣ ಚೆಂಗಳ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ಉತ್ತಮ ಕಬಡ್ಡಿ ಪಟುವಾಗಿದ್ದ ಇವರು, ಕ್ರೀಡೆಯಲ್ಲಿ ಜಿಲ್ಲೆಯಲ್ಲಿ ಖ್ಯಾತಿ ಪಡೆದಿದ್ದರು. ಪೈಕ ರವಿ ಎಂದೇ ಪರಿಚಿತರಾಗಿದ್ದರು. ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇವರು, ನಂತರ ಊರಿಗೆ ವಾಪಸಾಗಿದ್ದರು. ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ಬಿಗಾಗಿ ಹಲವು ವರ್ಷಗಳ ಕಾಲ ಕಬಡ್ಡಿ ಆಟ ಆಡಿದ್ದರು. ಕಳೆದ ವರ್ಷ ಕ್ಲಬ್ಬಿನ ವತಿಯಿಮದ ನಡೆದ ಕಾರ್ಯಕ್ರಮದಲ್ಲಿ ಇವರನ್ನು ಗೌರವಿಸಲಾಗಿತ್ತು. ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.


