ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ, ತೂಮಿನಾಡು ಇದರ ನೇತೃತ್ವದಲ್ಲಿ, ಶ್ರೀ ಮಹಾಕಾಳಿ ಭಜನಾ ಮಂದಿರ ತೂಮಿನಾಡು, ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆ ಕುಂಜತ್ತೂರುಪದವು, ಶ್ರೀ ಶಿವಶಕ್ತಿ ಸೀತಾರಾಮ ಭಜನಾಮಂದಿರ ಕುಂಜತ್ತೂರು, ಕುಲಾಲ ಪಂಚಾಯತಿ ಶಾಖೆಗಳ ಸಹಕಾರದಲ್ಲಿ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆಯ ಸಹಯೋಗದಲ್ಲಿ ಇತ್ತೀಚೆಗೆ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಸಮುದಾಯದ ಭವನ ತುಮಿನಾಡುನಲ್ಲಿ ಜಿಲ್ಲಾ ಮಟ್ಟದ ರಕ್ತದಾನ ಶಿಬಿರ ಮತ್ತು ಅರೋಗ್ಯ ತಪಾಸಣಾ ಶಿಬಿರ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ವಹಿಸಿದ್ದರು. ಉದ್ಯಾವರ ಮಾಡ ಅಣ್ಣ ದೈವದ ಪಾತ್ರಿ ರಾಜ ಬೆಲ್ಚಾಡರು ದೀಪ ಪ್ರಜ್ವಲನೆಗೊಳಿಸಿ ಶುಭ ಹಾರೈಸಿದರು. ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಖ್ಯಾತ ನ್ಯೂರೋ ಸರ್ಜನ್ ಹಾಗೂ ಮುಖ್ಯಸ್ಥ ಡಾ. ಅನಂತನ್.ಆರ್ ರಕ್ತದಾನದ ಮಹತ್ವ ಮತ್ತು ಜನರ ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ಉದ್ಯಮಿ ಮೋಹನ್ ಶೆಟ್ಟಿ ತೂಮಿನಾಡು, ಲೋಹಿತ್ ಶೆಟ್ಟಿ ಅಮ್ಮ ಮಜಲು, ಸೋಮಪ್ಪ ಸಾಲ್ಯಾನ್ ಕುಂಜತ್ತೂರು ಮುಖ್ಯ ಅತಿಥಿಗಳಾಗಿದ್ದರು. ಕೃಷ್ಣ ಶಿವಕೃಪಾ, ಕಮಲಾಕ್ಷ. ಕೆ, ಜಯರಾಮ ಶೆಟ್ಟಿ, ರಾಜೇಶ್ ಕುಲಾಲ್ ತೂಮಿನಾಡು, ಚೇತನ್ ತೂಮಿನಾಡು, ಗೋಪಾಲ ಸಾಲ್ಯಾನ್ ಕಣ್ವತೀರ್ಥ, ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸಂಪರ್ಕ ಅಧಿಕಾರಿ ಉದಯ ಕುಮಾರ್ ಕಣ್ವತೀರ್ಥ ಉಪಸ್ಥಿತರಿದ್ದರು. ಶಿಬಿರದಲ್ಲಿ ನುರಿತ ವೈದ್ಯರಿಂದ ವೈದ್ಯಕೀಯ ತಪಾಸಣೆ, ರಕ್ತದೋತ್ತಡ, ಮಧುಮೇಹ ಮತ್ತು ಥೈರೊಯ್ಡ್ ಪರೀಕ್ಷೆ, ಎಲುಬು ಮತ್ತು ಕೀಲು ವಿಭಾಗ, ಕಿವಿ ಮೂಗು ಗಂಟಲು ವಿಭಾಗ, ಚರ್ಮ ಚಿಕಿತ್ಸೆ ಹಾಗೂ ಇಸಿಜಿ ಪರೀಕ್ಷೆ ಉಚಿತವಾಗಿ ನಡೆಯಿತು. ಸುಮಾರು 150 ಮಂದಿ ಶಿಬಿರದ ಪ್ರಯೋಜನ ಪಡಕೊಂಡರು. ರಕ್ತದಾನಿಗಳ ಸಹಕಾರದೊಂದಿಗೆ 51 ಯೂನಿಟ್ ರಕ್ತ ಸಂಗ್ರಹ ನಡೆಸಲಾಯಿತು. ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು ಸ್ವಾಗತಿಸಿ, ಜಿಲ್ಲಾ ಸಂಫದ ಕೋಶಾಧಿಕಾರಿ ಈಶ್ವರ ಕುಲಾಲ್ ಕಣ್ವತೀರ್ಥ ವಂದಿಸಿದರು. ನಿರಂಜನ್ ತೂಮಿನಾಡು ಪ್ರಾರ್ಥಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಸುಧೀರ್ ರಂಜನ್ ದೈಗೋಳಿ ಕಾರ್ಯಕ್ರಮ ನಿರೂಪಿಸಿದರು.

.jpg)
