ಕುಂಬಳೆ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ವನಿತ ಮಹಿಳಾ ಸಮಾಜ ನಾಯ್ಕಾಪು ಕುಂಬಳೆ ಇವರ ಜಂಟಿ ಆಶ್ರಯದಲ್ಲಿ 3 ತಿಂಗಳ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಮಾತನಾಡಿ, ತರಬೇತಿ ಪಡೆದ ಮಹಿಳೆಯರು ಬ್ಯಾಂಕ್ ಸಾಲ ಸೌಲಭ್ಯ ಪಡೆದು ತಮ್ಮದೇ ವ್ಯಾಪಾರ ಮಾಡಿ ಬೇರೆ ಮಹಿಳೆಯರಿಗೆ ಮಾದರಿಯಾಗಬೇಕು ಎಂದರು. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಜೀವನ್ ಮಾತನಾಡಿದರು. ಹಿಂದೂ ಐಕ್ಯ ವೇದಿಕೆ ಕಾಸರಗೋಡು ಅಧ್ಯಕ್ಷೆ ವಸಂತಿ ಶುಭಹಾರೈಸಿದರು. ತರಬೇತಿ ನೀಡಿದ ವಿಜಯ ಭಟ್ ತರಬೇತಿ ಪಡೆದ ಮಹಿಳೆಯರು ತಾವು ಕಲಿತ ವಿದ್ಯೆ ಮರೆಯದೆ ಹೆಚ್ಚು ಕ್ರೀಯಾಶೀಲರಾಗಿ ಮುಂದುವರಿಯಲು ಸಲಹೆ ನೀಡಿದರು.
ಶಿಬಿರಾರ್ಥಿಗಳಾದ ಕುಮುದಾಕ್ಷಿ, ಆಯಿಷಾ, ಸುಮ, ವನಿತ, ನಳಿನಿ, ಸುಜಿತಾ ಅನಿಸಿಕೆ ಹಂಚಿಕೊಂಡರು. ಶೈಲಜಾ ನಿರೂಪಿಸಿದರು. ಸ್ಮಿತಾ ಸ್ವಾಗತಿಸಿ, ಸಂಧ್ಯಾ ವಂದಿಸಿದರು. ತರಬೇತಿ ಪೂರೈಸಿದ 24 ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

.jpg)
