ಚೆನ್ನೈ: ತಮಿಳುನಾಡಿನ ಬಿಜೆಪಿ ಚುನಾವಣಾ ಉಸ್ತುವಾರಿ ಪೀಯೂಷ್ ಗೋಯಲ್ ಅವರು ಸೀಟು ಹಂಚಿಕೆಯ ಬಗ್ಗೆ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಜೊತೆ ಮಂಗಳವಾರ ಮಾತುಕತೆ ನಡೆಸಿದ್ದಾರೆ.
ಹೋಟೆಲ್ವೊಂದರಲ್ಲಿ ನಡೆದ ಮಾತುಕತೆಯಲ್ಲಿ ಗೋಯಲ್ ಜೊತೆ ತಮಿಳುನಾಡು ಬಿಜೆಪಿಯ ಚುನಾವಣಾ ಸಹ ಉಸ್ತುವಾರಿ ಅರ್ಜುನ್ ರಾಮ್ ಮೇಘವಾಲ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್, ಪಕ್ಷದ ರಾಜ್ಯ ಉಸ್ತುವಾರಿ ಡಾ.ಪಿ. ಸುಧಾಕರ್ ರೆಡ್ಡಿ ಮತ್ತು ಎಐಎಡಿಎಂಕೆ ಹಿರಿಯ ನಾಯಕರು ಇದ್ದರು.
'2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಕ್ಕಿಂತ ಹೆಚ್ಚುವರಿಯಾಗಿ 10 ಸ್ಥಾನಗಳಿಗೆ ಅಂದರೆ ಒಟ್ಟು ಮೂವತ್ತು ಸ್ಥಾನಕ್ಕೆ ಬಿಜೆಪಿ ಬೇಡಿಕೆ ಇಡುವ ಸಾಧ್ಯತೆಯಿದೆ' ಎಂದು ಪಕ್ಷದ ಮೂಲಗಳು ತಿಳಿಸಿವೆ.

