ನಿಮಗೂ ಗೂಗಲ್ನಲ್ಲಿ ಸರ್ಚ್ ಮಾಡಲು ಕಷ್ಟವಾಗುತ್ತಿದೆಯೇ? ಯೂಟ್ಯೂಬ್ ವಿಡಿಯೋ ಪ್ಲೇ ಆಗುತ್ತಿಲ್ಲವೇ? ಇದು ನಿಮ್ಮ ಸಮಸ್ಯೆ ಮಾತ್ರ ಅಲ್ಲ. ಭಾರತ ಹಾಗೂ ಅಮೆರಿಕದಾದ್ಯಂತ ಬಳಕೆದಾರರು ಇದೇ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.
ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಬಳಕೆದಾರರು ಯೂಟ್ಯೂಬ್, ಗೂಗಲ್ ಸರ್ಚ್ ಮುಂತಾದ ಸೇವೆಗಳಲ್ಲಿ ವ್ಯಾಪಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಯುಎಸ್ ಮೂಲದ ಸರ್ಚ್ ಎಂಜಿನ್ ಗೂಗಲ್ ಸಿಕ್ಕಾಪಟ್ಟೆ ಡೌನ್ ಆಗಿದೆ. ಅನೇಕ ಬಳಕೆದಾರರು ಗೂಗಲ್ ಸರ್ಚ್, ಯೂಟ್ಯೂಬ್ ಮತ್ತು ಯೂಟ್ಯೂಬ್ ಟಿವಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಔಟೇಜ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಡೌನ್‌ಡೆಕ್ಟರ್ ಪ್ರಕಾರ, ಇಲ್ಲಿಯವರೆಗೆ 11,000ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಲಾಗಿದೆ. ಬಳಕೆದಾರರಿಗೆ ತಮಗೆ ಬೇಕಾದ ಮಾಹಿತಿ ಸರ್ಚ್ ಮಾಡಲು, ವಿಡಿಯೋಗಳನ್ನು ಲೋಡ್ ಮಾಡಲು ಅಥವಾ ಲೈವ್ ಟಿವಿ ಸ್ಟ್ರೀಮ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.
ಭಾರತದ ಬಗ್ಗೆ ಹೇಳುವುದಾದರೆ, ಯೂಟ್ಯೂಬ್ ಸಮಸ್ಯೆಯ ಬಗ್ಗೆ ಬಂದ ರಿಪೋರ್ಟ್ಗಳು ಸುಮಾರು 3,336. ಅದರಲ್ಲಿ, ಶೇ. 53ರಷ್ಟು ಬಳಕೆದಾರರು ಸರ್ವರ್ ಸಂಪರ್ಕವನ್ನು ವರದಿ ಮಾಡಿದ್ದಾರೆ. ಶೇ. 34ರಷ್ಟು ಬಳಕೆದಾರರು ವೆಬ್‌ಸೈಟ್‌ನಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಅವರಲ್ಲಿ ಶೇ. 13ರಷ್ಟು ಜನರು ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ಸ್ಟ್ರೀಮಿಂಗ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಡೌನ್‌ಡೆಕ್ಟರ್ ಡೇಟಾವು ಸುಮಾರು ಶೇ. 73ರಷ್ಟು ಬಳಕೆದಾರರು ವೆಬ್‌ಸೈಟ್ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ತೋರಿಸುತ್ತದೆ. ಸುಮಾರು ಶೇ. 18ರಷ್ಟು ಜನರು ವಿಡಿಯೋ ಸ್ಟ್ರೀಮಿಂಗ್ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಉಳಿದ ಶೇ. 9ರಷ್ಟು ಜನರು ಯೂಟ್ಯೂಬ್ ಅಪ್ಲಿಕೇಶನ್‌ನಿಂದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಈ ವರದಿಗಳು ಬಳಕೆದಾರರು ಪುಟಗಳನ್ನು ಸರಿಯಾಗಿ ಲೋಡ್ ಮಾಡಲು ಅಥವಾ ವಿಳಂಬವಿಲ್ಲದೆ ವೀಡಿಯೊಗಳನ್ನು ಪ್ಲೇ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿವೆ.

