ಕಾಸರಗೋಡು: ಐದು ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಅಧ್ಯಕ್ಷ ಗಾದಿ ವಶಪಡಿಸಿಕೊಂಡಿದೆ. ನಾಲ್ಕು ಪಂಚಾಯತ್‍ಗಳಲ್ಲಿ ಬಹುಮತದಿಂದ ಗೆದ್ದರೆ ಬದಿಯಡ್ಕ ಗ್ರಾಮ ಪಂಚಾಯತಿಯಲ್ಲಿ ಲಾಟರಿ ಮೂಲಕ ಗೆಲ್ಲಲಾಗಿದೆ.
ಮಧೂರು, ಕಾರಡ್ಕ, ಬೆಳ್ಳೂರು ಮತ್ತು ಕುಂಬ್ಡಾಜೆಯಲ್ಲಿ ಬಿಜೆಪಿ ಅಧ್ಯಕ್ಷೀಯ ಅಭ್ಯರ್ಥಿಗಳು ಬಹುಮತದಿಂದ ಗೆದ್ದರು. ಕಳೆದ ಬಾರಿ, ಮೂರು ಪಂಚಾಯತಿಗಳಲ್ಲಿ ಪಕ್ಷ ಅಧಿಕಾರದಲ್ಲಿತ್ತು.
ಮಧೂರು, ಕಾರಡ್ಕ ಮತ್ತು ಬೆಳ್ಳೂರು ಕಳೆದ ಬಾರಿ ಅಧಿಕಾರದಲ್ಲಿದ್ದು ಈಗ ಮುಂದುವರಿಯಲಿದ್ದು, ಬದಿಯಡ್ಕ ಮತ್ತು ಕುಂಬ್ಡಾಜೆ ಹೊಸದಾಗಿ ಸೇರ್ಪಡೆಗೊಂಡ ಪಂಚಾಯತಿಗಳಾಗಿವೆ. ಬದಿಯಡ್ಕ ಪಂಚಾಯತಿಯಲ್ಲಿ, ಬಿಜೆಪಿ ಮತ್ತು ಯುಡಿಎಫ್ ಸಮಾನ ಸ್ಥಾನಗಳನ್ನು ಹೊಂದಿದ್ದವು. ಲಾಟರಿ ಮೂಲಕ ನಡೆದ ಅದೃಷ್ಟ ಪರೀಕ್ಷೆಯಲ್ಲಿ ಬಿಜೆಪಿ ಅಧಿಕಾರ ತನ್ನದಾಗಿಸಿದೆ. ಇಲ್ಲಿ ಡಿ. ಶಂಕರ ಅಧ್ಯಕ್ಷರಾಗಿ ಆಯ್ಕೆಯಾಗಿರುವರು.
ಕಾಸರಗೋಡಿನಲ್ಲಿ ನಡೆದ ಈ ಅನಿರೀಕ್ಷಿತ ನಡೆ ಬಿಜೆಪಿಗೆ ಹುರುಪು ಮೂಡಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಡ ಮತ್ತು ಬಲ ರಂಗಗಳಿಗೆ ಬಿಜೆಪಿ ಪ್ರಬಲ ಎಚ್ಚರಿಕೆ ನೀಡುವ ಸಾಮಥ್ರ್ಯವನ್ನು ಹೊಂದಿದೆ ಎಂಬುದರ ಸಂಕೇತವಾಗಿದೆ ಸ್ಥಳೀಯಾಡಳಿತ ಚುನಾವಣೆ ಎಂದು ವಿಶ್ಲೇಷಿಸಲಾಗಿದೆ.

