HEALTH TIPS

RailOne ಆಯಪ್‌ನಲ್ಲಿ ಟಿಕೆಟ್‌ ಖರೀದಿಸಿದರೆ ಶೇ 3ರಷ್ಟು ರಿಯಾಯಿತಿ

ನವದೆಹಲಿ: 'ರೈಲ್‌ಒನ್‌' ಅ‍ಪ್ಲಿಕೇಷನ್‌ ಮೂಲಕ ಕಾಯ್ದಿರಿಸದ ಟಿಕೆಟ್‌ ಖರೀದಿಸುವ ಪ್ರಯಾಣಿಕರಿಗೆ ಒಟ್ಟು ಮೊತ್ತದಲ್ಲಿ ಶೇ 3ರಷ್ಟು ರಿಯಾಯಿತಿ ಕೊಡುಗೆಯನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ. 

2026ರ ಜನವರಿ 14ರಿಂದ ಜುಲೈ 14ರವರೆಗೆ ಈ ಕೊಡುಗೆ ಲಭಿಸಲಿದೆ. ಗ್ರಾಹಕರು 'ರೈಲ್‌ಒನ್‌ ಆಯಪ್‌' ಮೂಲಕ 'ಆರ್‌- ವ್ಯಾಲಟ್‌' ಬಳಸಿ ಟಿಕೆಟ್‌ ಖರೀದಿಸಿದಾಗ ಮಾತ್ರ ಈ ಕೊಡುಗೆ ಲಭಿಸಲಿದೆ.

ಇತರೆ ಅಪ್ಲಿಕೇಷನ್‌ ಅಥವಾ ಡಿಜಿಟಲ್ ವೇದಿಕೆಗಳ ಮೂಲಕ ಕಾಯ್ದಿರಿಸುವ ಟಿಕೆಟ್‌ಗಳಿಗೆ ಈ ರಿಯಾಯಿತಿ ಇರುವುದಿಲ್ಲ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ರಿಯಾಯಿತಿ ಕೊಡುಗೆಗೆ ಸಂಬಂಧಿಸಿದಂತೆ ರೈಲ್‌ಒನ್‌ ಅಪ್ಲಿಕೇಷನ್‌ ತಂತ್ರಾಂಶದಲ್ಲಿ ಅಗತ್ಯ ಬದಲಾವಣೆ ತರುವಂತೆ ಸಚಿವಾಲಯವು, ರೈಲ್ವೆ ಮಾಹಿತಿ ವ್ಯವಸ್ಥೆಯ ಕೇಂದ್ರಕ್ಕೆ (ಸಿಆರ್‌ಐಎಸ್‌) ಸೂಚನೆ ನೀಡಿದೆ.

ರೈಲ್‌ಒನ್‌ ಅಪ್ಲಿಕೇಷನ್‌ ಮೂಲಕ ಟಿಕೆಟ್‌ ಖರೀದಿಸುವಾಗ 'ಆರ್‌-ವ್ಯಾಲಟ್‌' ಮೂಲಕ ಪಾವತಿ ಮಾಡಿದರೆ ಈಗಾಗಲೇ ಜಾರಿಯಲ್ಲಿರುವ ಶೇ 3ರಷ್ಟು 'ಕ್ಯಾಶ್‌ಬ್ಯಾಕ್‌ ಕೊಡುಗೆ'ಯು ಹಿಂದಿನಂತೆಯೇ ಮುಂದುವರಿಯಲಿದೆ ಎಂದೂ ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries