ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಮೊಮ್ಮಗಳು, ಅಮೆರಿಕದ ಪತ್ರಕರ್ತೆ ಟಟಿಯಾನಾ ತಮ್ಮ 35ನೇ ವಯಸ್ಸಿನಲ್ಲಿ ಕ್ಯಾನ್ಸರ್ನಿಂದ ನಿಧನರಾಗಿದ್ದಾರೆ.
ನಮ್ಮ ಸುಂದರ ಟಟಿಯಾನಾ ಇಂದು ಬೆಳಗ್ಗೆ ನಿಧನರಾದರು. ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ ಎಂದು ಕುಟುಂಬವು ಜೆಎಫ್ಕೆ ಲೈಬ್ರರಿ ಫೌಂಡೇಶನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಟಟಿಯಾನಾ ಅವರು ಶ್ಲೋಸ್ಬರ್ಗ್ ವಿನ್ಯಾಸಕ ಎಡ್ವಿನ್ ಶ್ಲೋಸ್ಬರ್ಗ್ ಮತ್ತು ರಾಜತಾಂತ್ರಿಕ ಕ್ಯಾರೋಲಿನ್ ಕೆನಡಿ ಅವರ ಪುತ್ರಿ. ತಾವು ಕ್ಯಾನ್ಸರ್ನಿಂದ ಬಳಲುತ್ತಿರುವುದಾಗಿ ಇತ್ತೀಚೆಗೆ ಟಟಿಯಾನಾ ಹೇಳಿಕೊಂಡಿದ್ದರು. ಒಂದು ವರ್ಷಕ್ಕಿಂತ ಕಡಿಮೆ ಅವಧಿ ವರೆಗೆ ಬದುಕಿರುತ್ತೇನೆಂದು ಇತ್ತೀಚೆಗೆ ಹೇಳಿಕೊಂಡಿದ್ದರು.
ಕೀಮೋಥೆರಪಿ ಮತ್ತು ಮೂಳೆ ಮಜ್ಜೆಯ ಕಸಿ ಸೇರಿದಂತೆ ತಾನು ಪಡೆದ ಚಿಕಿತ್ಸೆಗಳನ್ನು ಸ್ಕ್ಲೋಸ್ಬರ್ಗ್ ವಿವರಿಸಿದ್ದರು. ಆಕೆಯ ತಾತ ಅಮೆರಿಕ ಅಧ್ಯಕ್ಷ ಕೆನಡಿ 1963 ರಲ್ಲಿ ಹತ್ಯೆಗೀಡಾಗಿದ್ದರು.

