HEALTH TIPS

ಸತತವಾಗಿ ಕುಸಿಯುತ್ತಿದ್ದ ಷೇರುಪೇಟೆ ನಿನ್ನೆ ದಿಢೀರನೇ ಚೇತರಿಕೆ; ಮಾರುಕಟ್ಟೆ ತಿರುಗಿ ನಿಲ್ಲಲು ಏನು ಕಾರಣ?

ನವದೆಹಲಿ: ನಿನ್ಮೆ ಬೆಳಗ್ಗೆ ಟ್ರೇಡಿಂಗ್ ಅವಧಿಯಲ್ಲಿ ಷೇರು ಮಾರುಕಟ್ಟೆ (Stock Market) ಕಳೆಗುಂದಿತ್ತು. ಸತತ ಐದು ಸೆಷನ್ಸ್ ಕುಸಿದಿದ್ದ ಮಾರುಕಟ್ಟೆ, ಇವತ್ತು ಆರನೇ ಸೆಷನ್​ನಲ್ಲೂ ಭರ್ಜರಿ ಇಳಿಕೆಯ ಹಾದಿಯಲ್ಲಿತ್ತು. ಮಾಧ್ಯಮಗಳಲ್ಲೂ ಕೂಡ ಸತತ ಆರು ದಿನ ಷೇರು ಮಾರುಕಟ್ಟೆ ಕುಸಿದಿದೆ ಎನ್ನುವಂತಹ ಸುದ್ದಿ ಪ್ರಕಟವಾಯಿತು.

ಆದರೆ, ನೋಡನೋಡುತ್ತಿದ್ದಂತೆಯೇ ಮಾರುಕಟ್ಟೆ ಹಸಿರುಬಣ್ಣಕ್ಕೆ ತಿರುಗಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಪಾಸಿಟಿವ್ ಆಗಿವೆ.

ಸೆನ್ಸೆಕ್ಸ್ ಇವತ್ತು ಟ್ರೇಡಿಂಗ್ ಕೊನೆಯಲ್ಲಿ 83,878 ಅಂಕಗಳಲ್ಲಿ ಅಂತ್ಯಗೊಂಡಿತು. 302 ಅಂಕ ಅಥವಾ ಶೇ 0.36ರಷ್ಟು ಹೆಚ್ಚಳ ಆಗಿದೆ. ನಿಫ್ಟಿ50 ಸೂಚ್ಯಂಕವು ಶೇ. 0.42 ಅಥವಾ 107 ಅಂಕ ಗಳಿಕೆಯೊಂದಿಗೆ 25,790.25 ಮಟ್ಟದಲ್ಲಿ ಅಂತ್ಯಗೊಂಡಿದೆ.

ಸೆನ್ಸೆಕ್ಸ್ ಇವತ್ತು ಒಂದು ಹಂತದಲ್ಲಿ 82,861 ಅಂಕಗಳಿಗೆ ಕುಸಿದಿತ್ತು. ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡು 700 ಅಂಕಗಳನ್ನು ಗಳಿಸಿ, ಒಟ್ಟಾರೆ 302 ಅಂಕಗಳ ಮುನ್ನಡೆ ಪಡೆದಿದೆ. ಆದರೆ, ಲಾರ್ಜ್ ಕ್ಯಾಪ್ ಇಂಡೆಕ್ಸ್ ಸಕಾರಾತ್ಮಕ ಸ್ಪಂದನೆ ಪಡೆದಿವೆ. ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಷೇರುಗಳು ಹಿನ್ನಡೆ ಕಂಡಿವೆ.

ಷೇರು ಮಾರುಕಟ್ಟೆ ಸೋಮವಾರ ದ್ವಿತೀಯಾರ್ಧದಲ್ಲಿ ಜಿಗಿದಿದ್ದು ಯಾಕೆ?

ಭಾರತ ಮತ್ತು ಅಮೆರಿಕ ದೇಶಗಳು ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಅವರು ಹೇಳಿಕೆ ನೀಡಿದ್ದು ಮಾರುಕಟ್ಟೆಗೆ ಸಕಾರಾತ್ಮಕ ಭಾವನೆ ತರಲು ಸಹಾಯವಾಗಿದೆ.

'ಅಮೆರಿಕಕ್ಕೆ ಭಾರತದಷ್ಟು ಮುಖ್ಯವಾಗಿರುವ ದೇಶ ಮತ್ತೊಂದಿಲ್ಲ. ಟ್ರೇಡ್ ಡೀಲ್ ಅಂತಿಮಗೊಳಿಸಲು ಎರಡೂ ದೇಶಗಳು ಪ್ರಯತ್ನಿಸುತ್ತಿವೆ. ನಿಜವಾದ ಸ್ನೇಹಿತರು ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ಕೊನೆಯಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಯಶಸ್ವಿಯಾಗುತ್ತಾರೆ' ಎಂದು ಸರ್ಗಿಯೋ ಗೋರ್ ಹೇಳಿದ್ದಾರೆ. ಇವರ ಈ ಭರವಸೆದಾಯಕ ಮಾತುಗಳು ಮಾರುಕಟ್ಟೆಯ ಉತ್ಸಾಹ ಹೆಚ್ಚಲು ಕಾರಣವಾಗಿರಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries