ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಸಾಂಪ್ರದಾಯಿಕ ವರ್ಷಾವಧಿ ಜಾತ್ರೆ ಮತ್ತು ಮಂಡಲ ಪೂಜೆ ಇಂದಿನಿಂದ(ಜ.1) 3ರ ವರೆಗೆ ತಂತ್ರಿವರ್ಯ ವೇದಮೂರ್ತಿ ವರ್ಕಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು ಬೆಳಿಗ್ಗೆ 6.30 ರಿಂದ ಭಜನೆ, 8ಕ್ಕೆ ಪ್ರಾರ್ಥನೆ, ಶ್ರೀದೇವರಿಗೆ ಕಾರ್ತಿಕ ಪೂಜೆ, ಬಲಿ ಉತ್ಸವ ನಡೆಯಲಿದೆ.
ನಾಳೆ(ಜ.2) ಬೆಳಿಗ್ಗೆ 6ಕ್ಕೆ ಉಷಃಪೂಜೆ, ಶ್ರೀನಾರಾಯಣ ದೇವರ ಬಲಿ ಉತ್ಸವ, 9 ರಿಂದ ಡಾ.ಮಹೇಶ್ ಪದ್ಯಾಣ ಅವರ ತಂಡದವರಿಂದ ಲಘು ಶಾಸ್ತ್ರೀಯ ಸಂಗೀತ, 9.30ರಿಂದ ತುಲಾಭಾರ ಸೇವೆ, ಬಳಿಕ ಮಹಾಪೂಜೆ, ಬಲಿ ಉತ್ಸವ, ಅನ್ನಸಂತರ್ಪಣೆ, ಸಂಜೆ 6 ರಿಂದ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ವøಂದದವರಿಂದ ನೃತ್ಯ ಹರ್ಷಣಂ, 7.30 ರಿಂದ ಬಯ್ಯತ ಬಲಿ, ಕಟ್ಟೆಪೂಜೆ, ಉತ್ಸವ, ರಾತ್ರಿ ಪೂಜೆ, ಬಲಿ ನಡೆಯಲಿದೆ.
ಜ.3 ರಂದು ಬೆಳಿಗ್ಗೆ 9 ರಿಂದ ಮಹಾಲಿಂಗ ಭಟ್ ಬೆಳ್ಳಾರೆ ತಮಡದವರಿಂದ ನಾರಾಯಣೀಯಂ ಪಾರಾಯಣ, 10 ರಿಂದ ಶ್ರೀದೇವರ ಬೆಳಗಿನ ಬಲಿ-ಉತ್ಸವ, ಬಟ್ಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ 2 ರಿಂದ ಹವ್ಯಾಸಿ ಯಕ್ಷ ಬಳಗ ಕೋಳ್ಯೂರು ತಂಡದವರಿಂದ ಕಲಾಗ್ನಿ ರುದ್ರ ಯಕ್ಷಗಾನ ಬಯಲಾಟ, ರಾತ್ರಿ ರಂಗಪೂಜೆ, ಶ್ರೀಭೂತಬಲಿ ಉತ್ಸವ, ಮಂತ್ರಾಕ್ಷತೆಯೊಂದಿಗೆ ಉತ್ಸವ ಕೊನೆಗೊಳ್ಳಲಿದೆ.
ಜ.6 ರಂದು ರಾತ್ರಿ 8ಕ್ಕೆ ಭಂಡಾರ ಇಳಿಯುವುದು, 7 ರಂದು ಬೆಳಿಗ್ಗೆ 10 ರಿಂದ ಮಂದ್ರಾಯಿ ದೈವದ ನೇಮ ನಡೆಯಲಿದೆ.
ಜ.22 ರಂದು ಮೂಡಪ್ಪ ಸೇವೆ ಬಲಿ ಉತ್ಸವ ಹಾಗೂ ಫೆ.16 ರಂದು ಬ್ರಹ್ಮಕಲಶೋತ್ಸವದ ವಾರ್ಷಿಕೋತ್ಸವ ನಡೆಯಲಿದೆ.

