ಉಪ್ಪಳ: ಕ್ಯಾಂಪ್ಕೋ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ಕ್ಯಾಂಪ್ಕೋ ಬಾಯಾರು ಶಾಖೆಯಲ್ಲಿ ನಡೆಯಿತು. ಸಂಸ್ಥೆಯ ಬಾಯಾರು ಶಾಖೆಯ ಸಕ್ರಿಯ ಸದಸ್ಯ ಹರಿಕೃಷ್ಣ ಉಪಾಧ್ಯಾಯ ಎಡಕ್ಕಾನ, ಪೆರ್ಮುದೆ ಅವರ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಕ್ರಿಯೆಗೆ ಸಹಾಯಧನದ ಮೊತ್ತ ರೂ. 50,000( ಐವತ್ತು ಸಾವಿರ)ದ ಚೆಕ್ ನ್ನು ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ ಅವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಸತೀಶ್ಚಂದ್ರ ಭಂಡಾರಿ ಕೋಳಾರು, ಸದಾನಂದ ಶೆಟ್ಟಿ ಕೊಮ್ಮಂಡ, ವೈ.ವೆಂಕಟ್ರಮಣ ಭಟ್, ವಿವೇಕಾನಂದ ಗೌಡ, ಸೌಮ್ಯಾ ಪ್ರಕಾಶ್, ಗಣೇಶ್ ಪಾರೆಕಟ್ಟ, ಕ್ಯಾಂಪ್ಕೋ ಬದಿಯಡ್ಕ ವಲಯ ಪ್ರಬಂಧಕ ಚಂದ್ರ ಯಂ, ಬಾಯಾರು ಶಾಖೆಯ ಪ್ರಬಂಧಕ ರಮೇಶ್ ವೈ. ಮತ್ತು ಶಾಖೆಯ ಸಿಬ್ಬಂದಿ ಕುಮಾರ್ ಉಪಸ್ಥಿತರಿದ್ದರು.

.jpg)
