ನವದೆಹಲಿ: ನೆಲದಿಂದ ನೆಲಕ್ಕೆ ಉಡ್ಡಯನ ಮಾಡಬಹುದಾದ ಹಾಗೂ ಕಡಿಮೆ ವ್ಯಾಪ್ತಿಯ ಎರಡು 'ಪ್ರಳಯ' ಕ್ಷಿಪಣಿಗಳ ಪರೀಕ್ಷೆಯನ್ನು ಒಡಿಶಾ ಕರಾವಳಿಯಲ್ಲಿ ಬುಧವಾರ ಯಶಸ್ವಿಯಾಗಿ ನಡೆಸಲಾಗಿದೆ.
'ಈ ಕ್ಷಿಪಣಿಗಳು 500 ಕೆಜಿಯಿಂದ 1,000 ಕೆಜಿ ಭಾರದ ಸಿಡಿತಲೆಗಳನ್ನು ಹೊತ್ತು 150 ಕಿ.ಮೀ.ನಿಂದ 500 ಕಿ.ಮೀ.ದೂರದ ವರೆಗೆ ಸಾಗಿ, ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿವೆ' ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಡಿಆರ್ಡಿಒ ಈ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದೆ.

