ಕಾಸರಗೋಡು: ರಂಗಚಿನ್ನಾರಿ ಕಾಸರಗೋಡಿನ ಸಂಗೀತ ಘಟಕ'ಸ್ವರ ಚಿನ್ನಾರಿ'ವತಿಯಿಂದ ಪ್ರತಿಭಾ ನಂದಿನಿ ಕಾರ್ಯಕ್ರಮದನ್ವಯ ಶಿವಾರ್ಪಣೆ ಭರತನಾಟ್ಯ ಸಮಾರಂಭ ಫೆ. 25ರಂದು ಮಧ್ಯಾಹ್ನ 2.30ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ.
ನಾರಿ ಚಿನ್ನಾರಿ ಅಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ನಗರಸಭಾ ಸದಸ್ಯೆ ದಿವ್ಯಾಸಂದೀಪ್ ಸಮಾರಂಭ ಉದ್ಘಾಟಿಸುವರು. ಶಿಕ್ಷಕಿ ಅಕ್ಷತಾ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ದೀರ್ಘ ಕಾಲ ತುದಿಗಾಲಲ್ಲಿ ನಿಲ್ಲುವ ಮೂಲಕ ಬುಕ್ ಆಪ್ ರೆಕಾರ್ಡ್ ಹೊಂದಿರುವ ಆಶಿತಾ ಅವರನ್ನು ಗೌರವಿಸಲಾಗುವುದು. ವಿದುಷಿ ಅಶ್ವಿನಿ ಕೆ.ಎಂ ಅವರಿಂದ ಭರತನಾಟ್ಯ, ಪ್ರಣಮ್ಯ ಕೆ.ಎಸ್ ಅವರಿಂದ ಏಕಪಾತ್ರಾಭಿನಯ, ಹಾಡು ಇರಲಿದೆ.
ರಂಗಚಿನ್ನಾರಿ ನಿರ್ದೇಶಕರಾದ ಕಾಸರಗೋಡು ಚಿನ್ನ, ಕೋಳಾರು ಸತೀಶ್ಚಂದ್ರ ಭಂಡಾರಿ ಕೋಳಾರು, ಕೆ. ಸತ್ಯನಾರಾಯಣ, ಮನೋಹರ್ ಶೆಟ್ಟಿ ಪಾಲ್ಗೊಳ್ಳುವರು.


