HEALTH TIPS

5 ವರ್ಷಗಳಲ್ಲಿ ₹8,621.12 ಕೋಟಿ ದಂಡ ವಿಧಿಸಿದ ರಾಷ್ಟ್ರೀಕೃತ ಬ್ಯಾಂಕ್‌ಗಳು

ನವದೆಹಲಿ: ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಕಾರಣಕ್ಕಾಗಿ ಖಾತೆದಾರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಕಳೆದ ಐದು ವರ್ಷಗಳಲ್ಲಿ ₹8,621.12 ಕೋಟಿ ದಂಡ ವಿಧಿಸಿವೆ.

ಉತ್ತರ ಪ್ರದೇಶದ ಬ್ಯಾಂಕ್‌ಗಳು ಅತಿ ಹೆಚ್ಚು ದಂಡ ವಿಧಿಸಿವೆ. ತಮಿಳುನಾಡು, ಮಹಾರಾಷ್ಟ್ರ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

ಕರ್ನಾಟಕ ನಾಲ್ಕು ಹಾಗೂ ಬಿಹಾರ ಐದನೇ ಸ್ಥಾನದಲ್ಲಿವೆ. ಲೋಕಸಭೆಯ ಅರ್ಜಿಗಳ ಸಮಿತಿಯು ಮಂಡಿಸಿದ ವರದಿಯಲ್ಲಿ ಈ ಮಾಹಿತಿ ತಿಳಿದುಬಂದಿದೆ.

ಉತ್ತರ ಪ್ರದೇಶ ₹1,233.97 ಕೋಟಿ, ಮಹಾರಾಷ್ಟ್ರ ₹1,088.18 ಕೋಟಿ, ಕರ್ನಾಟಕ ₹529.20 ಕೋಟಿ ಹಾಗೂ ಬಿಹಾರ ₹464.53 ಕೋಟಿ ದಂಡ ವಿಧಿಸಿವೆ.

2020-21 ಮತ್ತು 2023-24ರ ನಡುವೆ ದಂಡದ ಸಂಗ್ರಹ ಹೆಚ್ಚಾಗಿದೆ. ಆದರೆ, 2024-25ರಲ್ಲಿ ಸ್ವಲ್ಪ ಕಡಿಮೆಯಾಗಿದೆ. 2020ರ ಮಾರ್ಚ್‌ನಲ್ಲಿ ಎಸ್‌ಬಿಐ ಉಳಿತಾಯ ಖಾತೆಗಳ ಮೇಲೆ ದಂಡ ವಿಧಿಸುವುದನ್ನು ನಿಲ್ಲಿಸಿತ್ತು. ಆದರೂ, 2020-21ರಲ್ಲಿ ₹1,148.71 ಕೋಟಿಗಳಿದ್ದ ದಂಡದ ಮೊತ್ತ ಮುಂದಿನ ಮೂರು ಹಣಕಾಸು ವರ್ಷಗಳಲ್ಲಿ ಕ್ರಮವಾಗಿ ₹1,415.65 ಕೋಟಿ, ₹1,785.90 ಕೋಟಿ ಮತ್ತು ₹2,225.10 ಕೋಟಿಗೆ ಏರಿದೆ. 2024-25ರಲ್ಲಿ ₹2,045.74 ಕೋಟಿಗೆ ಇಳಿದಿದೆ.

'ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದವರಿಗೆ ದಂಡವನ್ನು ಕೈಬಿಡಲು ಕೆಲ ಬ್ಯಾಂಕ್‌ಗಳು ನಿರ್ಧಾರ ಕೈಗೊಂಡಿರುವುದು ಗ್ರಾಹಕರ ಹಿತದೃಷ್ಟಿಯಿಂದ ಉತ್ತಮ ನಡೆಯಾಗಿದೆ' ಎಂದು ಸಮಿತಿ ಹೇಳಿದೆ.

'ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದವರಿಗೆ ದಂಡ ವಿಧಿಸುವುದನ್ನು ಕೈಬಿಡಬೇಕು. ಚಾಲ್ತಿ ಖಾತೆಗಳನ್ನು ನಿರ್ವಹಿಸುವ ಸಣ್ಣ ಉದ್ದಿಮೆದಾರರು, ಸ್ವಯಂ ಉದ್ಯೋಗಿಗಳು ಮತ್ತು ಸಣ್ಣ ವ್ಯಾಪಾರಿಗಳನ್ನು ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್‌ಗಳು ಸಕಾರಾತ್ಮಕ ರೀತಿಯಲ್ಲಿ ನೋಡಬೇಕು' ಎಂದು ಸಮಿತಿ ಸಲಹೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries