HEALTH TIPS

5,00,000 ಕೋಟಿ ರೂಪಾಯಿ ಕಳೆದುಕೊಂಡ ಭಾರತೀಯ ಷೇರು ಮಾರುಕಟ್ಟೆ ಹೂಡಿಕೆದಾರರು

ಮುಂಬ್ಯೆ: ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರಿ ದೊಡ್ಡ ನಡುಕ ಉಂಟಾಗಿದೆ, ಇದರ ಪರಿಣಾಮ ಭಾರತ ಕೂಡ ಎದುರಿಸುವಂತೆ ಆಗಿದೆ. ಅದರಲ್ಲೂ ಭಾರತೀಯ ಷೇರುಪೇಟೆ ಇಂದು ದೊಡ್ಡ ನಷ್ಟ ಅನುಭವಿಸಿ, ಹೂಡಿಕೆದಾರರಿಗೆ ಆಘಾತ ತಂದಿದೆ. ಅಮೆರಿಕ ಅಧ್ಯಕ್ಷರ ತೆರಿಗೆ ನೀತಿ ಪರಿಣಾಮ ಇದೀಗ ಷೇರುಪೇಟೆ ಸಂಕಷ್ಟಕ್ಕೆ ಸಿಲುಕಿದ್ದು, ಇಂದು ಒಂದೇ ದಿನ 5,00,000 ಕೋಟಿ ರೂಪಾಯಿ ಕಳೆದುಕೊಂಡ ಭಾರತೀಯ ಷೇರು ಮಾರುಕಟ್ಟೆ ಹೂಡಿಕೆದಾರರು ಚಿಂತೆಯಲ್ಲಿ ಮುಳುಗಿದ್ದಾರೆ.

ಹಾಗಾದರೆ, ಯಾವೆಲ್ಲಾ ಷೇರುಗಳ ಮೌಲ್ಯ ಕುಸಿತ ಕಂಡಿದೆ? ಈವರೆಗೂ ಎಷ್ಟು ಅಂಕ ಕುಸಿತ ಕಂಡಿದೆ ಷೇರುಪೇಟೆ? ಬನ್ನಿ ತಿಳಿಯೋಣ.

ಭಾರತೀಯ ಷೇರುಪೇಟೆ ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ವಿಶ್ವಾಸ ಗಳಿಸಿದ್ದು, ಲಕ್ಷಾಂತರ ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ. ಆದರೆ ಇದೀಗ ಅಮೆರಿಕ ತೆರಿಗೆ ನೀತಿಯ ಪರಿಣಾಮ ಭಾರತದ ಹಲವು ವಲಯಗಳಲ್ಲಿ ದೊಡ್ಡ ತಲ್ಲಣ ಉಂಟಾಗಿದೆ. ಇದರ ಜೊತೆಗೆ ಎಐ ಕಾರಣಕ್ಕೆ ಐಟಿ ವಲಯ ಅಲ್ಲಾಡಿ ಹೋಗಿದ್ದು, ಐಟಿ ಷೇರುಗಳನ್ನ ಮಾರಾಟ ಮಾಡುವ ಪ್ರಕ್ರಿಯೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಸೆನ್ಸೆಕ್ಸ್ ಗರಿಷ್ಠ 1,300 ಅಂಕ ಕುಸಿತ

ಒಂದು ಕಡೆ ಈಗ ಐಟಿ ವಲಯದಲ್ಲಿ ಕೂಡ ಇಂದು ಕುಸಿತ ಎದುರಾಗಿದ್ದು, ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದ ಸಾಧ್ಯತೆಗಳೂ ಭಾರತೀಯ ಷೇರುಪೇಟೆ ಪ್ರಮುಖ ಸೂಚ್ಯಂಕದ ಮೇಲೆ ಪರಿಣಾಮ ಬೀರಿದೆ. ಎಲ್ಲಾ ಪರಿಣಾಮಗಳಿಂದ ಈಗ ಸೆನ್ಸೆಕ್ಸ್ ಗರಿಷ್ಠ 1,300 ಅಂಕಗಳ ತನಕ ಭಾರಿ ಕುಸಿತ ಕಂಡಿದೆ, ಹಾಗೇ ನಿಫ್ಟಿ-50 ಸುಮಾರು 350ಕ್ಕೂ ಹೆಚ್ಚು ಅಂಕ ಕಳೆದುಕೊಂಡು ಪರದಾಡಿದೆ. ಈ ಮೂಲಕ ಇಂದು ಬೆಳಗ್ಗೆಯಿಂದಲೇ ಭಾರತೀಯ ಷೇರುಪೇಟೆ ಕರಡಿ ಕುಣಿತಕ್ಕೆ ತತ್ತರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries