HEALTH TIPS

ಗಡಿಗೆ ಮಾನವರ ಬದಲಿಗೆ AI ಕಾವಲು; ಗಡಿ ನಿರ್ವಹಣಾ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ

ನವದೆಹಲಿ: ಗಡಿ ನಿರ್ವಹಣಾ ವ್ಯವಸ್ಥೆಯಲ್ಲಿ ಕ್ರಾಂತಿ ಸೃಷ್ಟಿಸುವ ಉದ್ದೇಶ ಹೊಂದಿರುವ ಗಡಿಭದ್ರತಾ ಪಡೆ (BSF) ಇದೀಗ ಕೃತಕ ಬುದ್ಧಿಮತ್ತೆ (AI) ಚಾಲಿತ ಗಡಿ ವೀಕ್ಷಣೆ ಹಾಗೂ ನಿಗಾವಣೆ ವ್ಯವಸ್ಥೆ (ಸ್ಮಾರ್ಟ್ ಬಾರ್ಡರ್ ಆಬ್ಸರ್ವೇಶನ್ ಆಯಂಡ್ ಮಾನಿಟರಿಂಗ್ ಸಿಸ್ಟಮ್) ಅನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಗಡಿಯುದ್ದಕ್ಕೂ ಇರುವ ಮೂಲಸೌಕರ್ಯಗಳೊಂದಿಗೆ ಸಂಯೋಜಿಸುವ ಗುರಿಯನ್ನು ಹೊಂದಿದೆ.

ಮಾನವ ಕೇಂದ್ರೀತ ಗಡಿಕಣ್ಗಾವಲು ವ್ಯವಸ್ಥೆಯ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದರ ಜೊತೆಗೆ ಸ್ವಯಂಚಾಲಿತ ಹಾಗೂ ತಕ್ಷಣದ ಬೇಹುಗಾರಿಕಾ ಮಾಹಿತಿಯನ್ನು ಒದಗಿಸುವ ಮೂಲಕ ಗಡಿಗಳನ್ನು ಸುಭದ್ರವಾಗಿಡುವ ಉದ್ದೇಶ ಇದಾಗಿದೆ.

ಗಡಿಗಳ ಸುರಕ್ಷತೆಗೆ ಮುಂದಿನ ತಲೆಮಾರಿನ ಕಣ್ಗಾವಲು ವ್ಯವಸ್ಥೆಯ ನೀಲನಕಾಶೆಯನ್ನು 2025ರ ಡಿಸೆಂಬರ್ನಲ್ಲಿ ಅಂತಿಮಗೊಳಿಸಲಾಗಿತ್ತು. ಏಕೀಕೃತ AI ಪ್ಲಾಟ್ಫಾರ್ಮ್ ಅನ್ನು ನಿಯೋಜಿಸುವುದೇ BSFನ ಉದ್ದೇಶವಾಗಿದೆ.

ಗಡಿಗಳಲ್ಲಿ ಒಳನುಸುಳುವಿಕೆ ಪತ್ತೆಹಚ್ಚುವಿಕೆ, ಸಂಚಾರ ವೀಕ್ಷಣೆ ಹಾಗೂ ಇತರ ಸೆನ್ಸರ್ ದತ್ತಾಂಶಗಳ ಏಕೀಕೃತ ಪರಿಷ್ಕರಣೆಗಳನ್ನು ಈ ವ್ಯವಸ್ಥೆ ಒದಗಿಸಲಿದೆ. ಈಗ ಅಳವಡಿಸಲಾಗಿರುವ ಅಥವಾ ನೂತನ ಸಿಸಿಟಿವಿ ಕ್ಯಾಮರಾಗಳಿಂದ ನೇರ ವೀಡಿಯೊ ಪ್ರಸಾರವೂ ಈ ವ್ಯವಸ್ಥೆಯಡಿ ಲಭ್ಯವಾಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries