HEALTH TIPS

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಕಾಸರಗೋಡು: ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕೊಡಮಾಡುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಕನ್ನಡ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಶ್ರೇಷ್ಠ ತನಿಖಾತ್ಮಕ ವರದಿ, ಸಾಮಾಜಿಕ ಸ್ಪಂದನದ ವರದಿ, ಸಾಹಸ ವರದಿ, ಜನಪರ ಕಾಳಜಿಯ ವರದಿ, ಸಾಮಾಜಿಕ ಅನಾಚಾರ ವಿರುದ್ಧ ವರದಿ, ಇವಲ್ಲದೆ ಶ್ರೇಷ್ಠ ಫೆÇೀಟೋ ಜರ್ನಲಿಸ್ಟ್, ಪತ್ರಿಕಾ ರಂಗದ ಧಾರ್ಮಿಕ ಕೊಡುಗೆ, ಪತ್ರಿಕಾ ರಂಗದ ಒಟ್ಟು ಸಾಧನೆ ಎಂಬೀ ವಿಭಾಗಗಳಲ್ಲಿ ಒಟ್ಟು 12 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ವರದಿಯು 2025 ರ ಜನವರಿ ಒಂದರಿಂದ ಡಿಸೆಂಬರ್ 31 ರ ಒಳಗಿನ ದಿವಸಗಳಲ್ಲಿ ದಿನಪತ್ರಿಕೆ,  ವಾರಪತ್ರಿಕೆ ಯಾ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿರಬೇಕು. ಸ್ಮರಣ ಸಂಚಿಕೆ ಬರಹಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. 

ಪ್ರಶಸ್ತಿಯು ಪ್ರತೀ ವಿಭಾಗದಲ್ಲಿ 10000 ರೂ. ನಗದು, ಪ್ರಶಸ್ತಿ ಪತ್ರ, ಫಲಕ ಎಂಬಿವುಗಳನ್ನು ಒಳಗೊಂಡಿರುತ್ತದೆ. ಅರ್ಹ ಪತ್ರಕರ್ತರು 2026ರ ಮಾರ್ಚ್ 10 ರ ಒಳಗಾಗಿ ತಮ್ಮ ಪೂರ್ಣ ಮಾಹಿತಿ, ಲೇಖನ ಬರಹಗಳನ್ನು ಒಳಗೊಂಡು ಅರ್ಜಿ ಸಲ್ಲಿಸಬಹುದು. ತಜ್ಞ ಆಯ್ಕೆ ಸಮಿತಿಯು ಪ್ರಶಸ್ತಿ ವಿಜೇತರನ್ನು ಗುರುತಿಸಲಿದೆ. ಮೇ ತಿಂಗಳಿನಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ಜರುಗಲಿದೆ. ಅರ್ಜಿಗಳನ್ನು ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಬಿ.ಕೆ. ಟವರ್ಸ್, ಸುಬ್ಬಯ್ಯಕಟ್ಟೆ, ಅಂಚೆ: ಕುಡಾಲುಮೇರ್ಕಳ, ಕಾಸರಗೋಡು ಜಿಲ್ಲೆ ವಿಳಾಸಕ್ಕೆ ಕಳುಹಿಸಿಕೊಡಬೇಕು. ಈ ಬಗ್ಗೆ ಮಾಹಿತಿಗಾಗಿ ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆ(9446395295, 9995945394)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries