HEALTH TIPS

ಅಮೆರಿಕ ಮಧ್ಯಸ್ಥಿಕೆ: ರಷ್ಯಾ, ಉಕ್ರೇನ್‌ ಶಾಂತಿ ಮಾತುಕತೆ

ಜಿನೀವಾ: ಅಮೆರಿಕದ ಮಧ್ಯಸ್ಥಿಕೆಯಲ್ಲಿ ಜಿನೀವಾದಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಯ ಎರಡನೆಯ ದಿನವಾದ ಬುಧವಾರ ಉಕ್ರೇನ್‌ ಮತ್ತು ರಷ್ಯಾದ ರಾಜತಾಂತ್ರಿಕ ಪ್ರತಿನಿಧಿಗಳು, ಉಭಯ ದೇಶಗಳ ನಡುವಿನ ಮಿಲಿಟರಿ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.

ಚರ್ಚೆ ರಚನಾತ್ಮಕವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. 'ಚರ್ಚೆಯ ವ್ಯಾಪ್ತಿ ಮತ್ತು ನಿರ್ಣಯದ ಕುರಿತು ಶೀಘ್ರದಲ್ಲೇ ಸ್ಪಷ್ಟಡಿಸುತ್ತೇವೆ' ಎಂದು ಉಕ್ರೇನ್‌ ನಿಯೋಗದ ನೇತೃತ್ವ ವಹಿಸಿರುವ ರುಸ್ಟೆಮ್‌ ಉಮರೊವ್‌ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

'ಉಕ್ರೇನ್‌ನಲ್ಲಿ ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಅಮೆರಿಕ ಇತ್ತೀಚಿನ ವರ್ಷಗಳಲ್ಲಿ ನಡೆಸುತ್ತಿರುವ ಪ್ರಯತ್ನಗಳು ಅರ್ಥಪೂರ್ಣ ಪ್ರಗತಿ ಕಂಡಿವೆ' ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್‌ಕಾಫ್‌ ಹೇಳಿದ್ದಾರೆ.

ರಷ್ಯಾ ಮತ್ತು ಉಕ್ರೇನ್‌ ನಡುವೆ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧ ಕೊನೆಗಾಣಿಸುವ ಸಲುವಾಗಿ ಅಮೆರಿಕವು 28 ಅಂಶಗಳನ್ನು ಒಳಗೊಂಡ ಶಾಂತಿ ಒಪ್ಪಂದವೊಂದನ್ನು ರೂಪಿಸಿದೆ. ಜಿನೀವಾದ ಸಭೆಯು ಉಕ್ರೇನ್‌ ಮತ್ತು ರಷ್ಯಾ ನಡುವೆ ಅಮೆರಿಕ ಆಯೋಜಿಸಿರುವ ಮೂರನೆಯ ಸುತ್ತಿನ ನೇರ ಮಾತುಕತೆ ಆಗಿದೆ.

'ಕದನ ವಿರಾಮ ಘೋಷಿಸಿ, ರಷ್ಯಾ ಅಧ್ಯಕ್ಷ ಪುಟಿನ್‌ ಅವರೊಂದಿಗೆ ಮುಖಾಮುಖಿ ಮಾತುಕತೆ ನಡೆಸಲು ಸಿದ್ಧ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದರು. ಆದರೆ, ಕದನ ವಿರಾಮ ಘೋಷಣೆಗೂ ಮುನ್ನ, ಉಕ್ರೇನ್‌ ಜತೆಗೆ ಸಮಗ್ರ ಒಪ್ಪಂದವನ್ನು ಬಯಸುವುದಾಗಿ ರಷ್ಯಾ ಹೇಳಿತ್ತು.

 ಪುಟಿನ್‌

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries