HEALTH TIPS

3 ತಿಂಗಳು ಮೇಲ್ಪಟ್ಟ ಮಗು ದತ್ತು ಪಡೆದ ತಾಯಿಗೆ ಹೆರಿಗೆ ರಜೆ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಮಗುವಿನ ವಯಸ್ಸನ್ನು ಲೆಕ್ಕಿಸದೆ ದತ್ತು ಪಡೆದ ತಾಯಿಗೂ 3 ತಿಂಗಳ ಹೆರಿಗೆ ರಜೆಯನ್ನು (Maternity leave) ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಹೆತ್ತ ಮತ್ತು ದತ್ತು ಪಡೆದ ಮಗುವಿಗೆ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್ ಅವರ ದ್ವಿಸದಸ್ಯ ಪೀಠವು ಮಗುವನ್ನು ದತ್ತು ಪಡೆದ ತಾಯಿಗೆ ಮಗುವಿನ ವಯಸ್ಸನ್ನು ಲೆಕ್ಕಿಸದೆ 3 ತಿಂಗಳ ಹೆರಿಗೆ ರಜೆಯನ್ನು ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದೆ.

ಮೂರು ತಿಂಗಳು ಮೇಲ್ಪಟ್ಟ ವಯಸ್ಸಿನ ಮಕ್ಕಳನ್ನು ದತ್ತು ಪಡೆದ ಮಹಿಳೆಯರಿಗೆ ಹೆರಿಗೆ ರಜೆ ನಿರಾಕರಿಸುವಂತಿಲ್ಲ. ಇದು ಅಸಂವಿಧಾನಿಕ ಎಂದು ಹೇಳಿರುವ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠವು, ದತ್ತು ಪಡೆದ ಪೋಷಕರು ಮತ್ತು ಮಗುವಿಗೆ ಗೌರವಾನ್ವಿತ ಜೀವನದ ಹಕ್ಕನ್ನು ಗುರುತಿಸಿದೆ. ದತ್ತು ಪಡೆದ ತಾಯಿಗೆ 12 ವಾರಗಳ ಹೆರಿಗೆ ರಜೆ ನೀಡಬೇಕು ಎಂದು ಹೇಳಿದೆ.

ತಾಯಿಯ ಜೀವನದಲ್ಲಿ ಮಗು ತರುವ ವಿಧಾನಕ್ಕೆ ಅನುಗುಣವಾಗಿ ಮಾತೃತ್ವ ರಕ್ಷಣೆಯ ಉದ್ದೇಶವು ಬದಲಾಗುವುದಿಲ್ಲ. ಹಿರಿಯ ಮಗುವನ್ನು ದತ್ತು ಪಡೆದ ಮಹಿಳೆಯರನ್ನು 3 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ಪಡೆದ ಮಹಿಳೆಯರಂತೆಯೇ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಮಾತೃತ್ವ ರಕ್ಷಣೆಗೆ ಸಂಬಂದಿಸಿದ 2020ರ ಸಾಮಾಜಿಕ ಭದ್ರತಾ ಸಂಹಿತೆಯ ಸೆಕ್ಷನ್ 60(4) ರ ಅಡಿಯಲ್ಲಿ ವಯಸ್ಸಿನ ನಿರ್ಬಂಧಗಳು, ಆರ್ಟಿಕಲ್ 14ರ ಅಡಿಯಲ್ಲಿ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತವೆ. ಜೈವಿಕ ಮತ್ತು ದತ್ತು ಪಡೆದ ತಾಯಂದಿರು ವಿಭಿನ್ನ ವರ್ಗಗಳು ಎಂದು ಹೇಳಿರುವ ಸುಪ್ರೀಂ ಕೋರ್ಟ್ ಅದಕ್ಕಾಗಿ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ನಿರಾಕರಿಸಲು ಬರುವುದಿಲ್ಲ ಎಂದು ಹೇಳಿದೆ.

ಸಾಮಾಜಿಕ ಭದ್ರತಾ ಕಾಯ್ದೆಯಡಿಯಲ್ಲಿ ಮಗುವನ್ನು ಪಡೆಯುವುದು ಎಂದರೆ ಭಾವನಾತ್ಮಕ ಮತ್ತು ದೈಹಿಕ ಹೊಂದಾಣಿಕೆ ಕೂಡ ಸೇರಿದೆ.ಮಾತೃತ್ವ ರಜೆಯನ್ನು ನಿರಾಕರಿಸುವುದ್ ಅವರ ಈ ಅಗತ್ಯತೆಯನ್ನು ನಿರ್ಲಕ್ಷಿಸಿದಂತಾಗುತ್ತದೆ. ದತ್ತು ಸ್ವೀಕಾರವು ಕೂಡ ಸಂತಾನೋತ್ಪತ್ತಿ ಹಕ್ಕು ಎಂದೇ ಪರಿಗಣಿಸಲಾಗುತ್ತದೆ ಎಂದು ಪೀಠವು ತಿಳಿಸಿದೆ.

ವಯಸ್ಸಿನ ಆಧಾರಿತ ನಿರ್ಬಂಧಕ್ಕೆ ಸಂಬಂಧಿಸಿ ಹಂಸನಂದಿನಿ ನಂದೂರಿ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇದೇ ಸಂದರ್ಭದಲ್ಲಿ ಪಿತೃತ್ವ ರಜೆಯನ್ನು ಸಾಮಾಜಿಕ ಭದ್ರತಾ ಪ್ರಯೋಜನವೆಂದು ಗುರುತಿಸುವ ಕಾನೂನನ್ನು ತರುವಂತೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ಒತ್ತಾಯಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries