HEALTH TIPS

ಇರಾನ್‌ಗೆ ಅರಬ್ ರಾಷ್ಟ್ರಗಳಿಂದ ಅಂತಿಮ ಎಚ್ಚರಿಕೆ! ಜಂಟಿ ಹೇಳಿಕೆ ಬಿಡುಗಡೆ

ರಿಯಾದ್: ಗಲ್ಫ್ ರಾಷ್ಟ್ರಗಳ ತೈಲ ಘಟಕಗಳ ಮೇಲೆ ಇರಾನ್ ನಡೆಸುತ್ತಿರುವ ಸತತ ದಾಳಿಗಳಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಏತನ್ಮಧ್ಯೆ ನಿನ್ನೆ ಇರಾನ್‌ನ ಈ ಕ್ರಮವನ್ನು ಖಂಡಿಸಿರುವ 12 ಅರಬ್ ಮತ್ತು 3 ಇಸ್ಲಾಮಿಕ್ ರಾಷ್ಟ್ರಗಳು, "ತಮ್ಮ ರಕ್ಷಣೆಗಾಗಿ ಮಿಲಿಟರಿ ಕ್ರಮ ಕೈಗೊಳ್ಳಲು ನಾವು ಹಿಂಜರಿಯುವುದಿಲ್ಲ" ಎಂದು ಕಠಿಣ ಎಚ್ಚರಿಕೆ ನೀಡಿವೆ.

ಸೌದಿ ಅರೇಬಿಯಾ, ಕತಾರ್, ಯುಎಇ (UAE), ಈಜಿಪ್ಟ್, ಜೋರ್ಡಾನ್, ಪಾಕಿಸ್ತಾನ, ಬಹ್ರೇನ್, ಕುವೈತ್, ಅಜೆರ್ಬೈಜಾನ್, ಲೆಬನಾನ್, ಸಿರಿಯಾ ಮತ್ತು ಟರ್ಕಿ ದೇಶಗಳ ವಿದೇಶಾಂಗ ಸಚಿವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ರಿಯಾದ್‌ನಲ್ಲಿ ನಡೆದ ತುರ್ತು ಸಭೆಯ ನಂತರ ಮಾತನಾಡಿದ ಸೌದಿ ವಿದೇಶಾಂಗ ಸಚಿವರು ನಮ್ಮ ಸಾರ್ವಭೌಮತ್ವ ಮತ್ತು ಆರ್ಥಿಕ ಸಂಪನ್ಮೂಲಗಳ ರಕ್ಷಣೆಗಾಗಿ ಮಿಲಿಟರಿ ಕ್ರಮ ಕೈಗೊಳ್ಳುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಇರಾನ್‌ನ ಇಂತಹ ಒತ್ತಡದ ತಂತ್ರಗಳು ರಾಜಕೀಯವಾಗಿ ಮತ್ತು ನೈತಿಕವಾಗಿ ಅವರಿಗೆ ತಿರುಗುಬಾಣವಾಗಲಿವೆ ಎಂದು ಗುಡುಗಿದ್ದಾರೆ.

ಇರಾನ್ ತಕ್ಷಣವೇ ತನ್ನ ದಾಳಿಗಳನ್ನು ನಿಲ್ಲಿಸಬೇಕು ಎಂದು ಈ ಒಕ್ಕೂಟ ಆಗ್ರಹಿಸಿದೆ.

​ಜನವಸತಿ ಪ್ರದೇಶಗಳು, ತೈಲ ಸಂಸ್ಕರಣಾಗಾರಗಳು, ಸಮುದ್ರದ ನೀರನ್ನು ಶುದ್ಧೀಕರಿಸುವ ಘಟಕಗಳು, ವಿಮಾನ ನಿಲ್ದಾಣಗಳು ಮತ್ತು ರಾಜತಾಂತ್ರಿಕ ಕಚೇರಿಗಳನ್ನು ಗುರಿಯಾಗಿಸಿಕೊಂಡು ಇರಾನ್ ಖಂಡಾಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುತ್ತಿರುವುದನ್ನು ಈ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries