HEALTH TIPS

ಸಂತಡ್ಕದಲ್ಲಿ ಶ್ರದ್ಧಾ-ಭಕ್ತಿಯಿಂದ ಜರಗಿದ 23ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ: ಹಿರಿಯ ಕಾರ್ಯಕರ್ತ ಕೃಷ್ಣ ಶೆಟ್ಟಿ ಕಲ್ಲಾಯಿ ಅವರಿಗೆ ಸನ್ಮಾನ

ಮಂಜೇಶ್ವರ: ಸಂತಡ್ಕ ವಿಶ್ವಹಿಂದು ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಮಾಡ ಇದರ ಆಶ್ರಯದಲ್ಲಿ 23ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ಮಹೋತ್ಸವ ಹಾಗೂ ಧಾರ್ಮಿಕ ಸಭೆ  ಅರಸು ಸಂಕಲ ವೇದಿಕೆ ಸಂತಡ್ಕ, ಮಾಡದಲ್ಲಿ ಶ್ರದ್ಧಾ-ಭಕ್ತಿಗಳಿಂದ ಶುಕ್ರವಾರ ಜರುಗಿತು. ಬೆಳಗ್ಗೆ ವೇದಮೂರ್ತಿ ಕುರಿಯ ರಾಮಮೂರ್ತಿಯವರ ದಿವ್ಯ ಹಸ್ತದಿಂದ ಮಹಾಗಣಪತಿ ಪೂಜೆ, ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ, ಮಹಾಪೂಜೆ ಹಾಗೂ ಮಹಾಮಂಗಳಾರತಿ ಸಂಪನ್ನಗೊಂಡಿತು. 


ಧಾರ್ಮಿಕ ಸಭೆ ಹಾಗೂ ಪ್ರವಚನ: 

ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಅರಸು ಸಂಕಲ ದೈವ ಕ್ಷೇತ್ರ ಸಂತಡ್ಕ ಮಾಡದ ಅಧ್ಯಕ್ಷ ಡಾ. ಎಂ. ಶ್ರೀಧರ ಭಟ್ ವಹಿಸಿದ್ದರು. ಮೀಯಪದವು ಎಸ್.ವಿ.ವಿ.ಎಚ್.ಎಸ್ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ಚಿಗುರುಪಾದೆ ಧಾರ್ಮಿಕ ಪ್ರವಚನ ನೀಡಿ, ಭಾರತೀಯ ಸಂಸ್ಕøತಿ ಮತ್ತು ವ್ರತಾಚರಣೆಗಳ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಯಾಗಿ ಮೀಯಪದವು ವಿ.ಎ.ಯು.ಪಿ ಶಾಲೆಯ ನಿವೃತ್ತ ಅಧ್ಯಾಪಕ ದಾಮೋದರ ಕೆ. ಕಬ್ಬಿಣಹಿತ್ತಿಲು ಭಾಗವಹಿಸಿದ್ದರು. ವೇದಿಕೆಯಲ್ಲಿ ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಉಷಾ ಪೂಂಜ ಕುಳೂರು ಮಾಣೂರು, ಮಾತೃಮಂಡಳಿ ಅಧ್ಯಕ್ಷೆ ಕಮಲಾಕ್ಷಿ ಸಂತಡ್ಕ ಉಪಸ್ಥಿತರಿದ್ದರು. ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದ ಹಿರಿಯ ಕಾರ್ಯಕರ್ತ ಕೃಷ್ಣ ಶೆಟ್ಟಿ ಕಲ್ಲಾಯಿ ಅವರನ್ನು ಶಾಲು ಹೊದಿಸಿ, ಫಲಪುಷ್ಪ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.  ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಸನ್ಮಾನಿತರ ಸಮಾಜಮುಖಿ ಸೇವೆಯನ್ನು ಸ್ಮರಿಸಿ ಅಭಿನಂದನಾ ನುಡಿಗಳನ್ನಾಡಿದರು. ಲೀಲಾವತಿ ರೈ ನೀರಹಳ್ಳಿ ಸನ್ಮಾನ ಪತ್ರ ವಾಚಿಸಿದರು. ಕು. ಅದ್ವಿತಾ ಬಾಳ್ಯೂರು ಪ್ರಾರ್ಥಿಸಿದರು. ಪಂಚಾಯತಿ ಸದಸ್ಯೆ ಆಶಾಲತ ಬಿ.ಎಂ. ಕಂಚಿಲ ಸ್ವಾಗತಿಸಿ, ಸಾಯಿತ್ ಶೆಟ್ಟಿ ಕುಳೂರು ಮಾಣೂರು ವಂದಿಸಿದರು. ಜಯಪ್ರಕಾಶ್ ಶೆಟ್ಟಿ ಅಂಗಡಿದಾರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮತ್ತು ಪ್ರಸಾದ ವಿತರಣೆ ನಡೆಯಿತು. ಸಮಾರಂಭದಲ್ಲಿ ಊರ-ಪರವೂರ ನೂರಾರು ಭಕ್ತಾದಿಗಳು ಹಾಗೂ ಮಾತೃ ಮಂಡಳಿಯ ಸದಸ್ಯೆಯರು ಪಾಲ್ಗೊಂಡಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries