ಬದಿಯಡ್ಕ: ಭಗವದ್ಭಕ್ತರ ಶ್ರದ್ಧಾಭಕ್ತಿಯ ಪ್ರಾರ್ಥನೆಯೊಂದಿಗೆ ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶ್ರೀ ಎಡನೀರು ಮಠ ಇವರ ದಿವ್ಯ ಅನುಗ್ರಹ, ಉಪಸ್ಥಿತಿಯೊಂದಿಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳವರ ನೇತೃತ್ವದಲ್ಲಿ ಶುಕ್ರವಾರ ಪೂರ್ವಾಹ್ನ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರ ಪ್ರತಿಷ್ಠೆ ಜರಗಿತು. ಪ್ರಾತಃಕಾಲ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾಪಾಣಿ, ಪ್ರತಿಷ್ಠಾಬಲಿ, ಅಂಕುರಪೂಜೆ, ಮಹಾಪೂಜೆ ನಡೆಯಿತು. ಸಂಜೆ ನಿತ್ಯ ನೈಮಿತ್ತಿಕಾದಿಗಳ ನಿರ್ಣಯ, ಭದ್ರದೀಪವಿಟ್ಟು ಕವಾಟಬಂಧನ, ಅಂಕುರ ಪೂಜೆ, ಸೋಪಾನ ಪೂಜೆ ನಡೆಯಿತು. ಪ್ರೊ.ಎ.ಎಲ್. ಅನಂತಪದ್ಮನಾಭ ಮತ್ತು ವಿದ್ವಾನ್ ಕಾರ್ಲೆ ಗಣರಾಜ್ ಇವರಿಂದ ದ್ವಂದ್ವ ವಯಲಿನ್ ವಾದನ ಜನಮನಸೂರೆಗೊಂಡಿತು. ರಾತ್ರಿ ಟೀಮ್ ರಾಧಾ ಮಾದವಂ ಮುನಿಯೂರು ಇವರಿಂದ ಕೈಕೊಟ್ಟಿಕ್ಕಳಿ ನಡೆಯಿತು.
ಇಂದು (ಶನಿವಾರ) ಕಾರ್ಯಕ್ರಮಗಳು:
ಪೂರ್ವಾಹ್ನ 6 ಗಂಟೆಗೆ ಗಣಪತಿ ಹೋಮ, ಇಂದ್ರಾದಿ ದಿಕ್ಪಾಲಕರ ಪ್ರತಿಷ್ಠೆ, ಸಪ್ತಮಾತೃಕ ಪ್ರತಿಷ್ಠೆ, ನಿರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರ ಪೂಜೆ ಸೋಪಾನ ಪೂಜೆ ನಡೆಯಲಿದೆ. ಸಂಜೆ 7ರಿಂದ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ತುಳುನಾಡ ಗಾನಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.

.jpg)
.jpg)
