HEALTH TIPS

ಲಂಕಾದತ್ತ ಮತ್ತೊಂದು ಇರಾನ್ ಯುದ್ಧನೌಕೆ.. ಇದನ್ನೂ ಹೊಡೆದುರುಳಿಸುತ್ತಾ ಅಮೆರಿಕ?

ಕೊಲಂಬೊ: ಬುಧವಾರ ಶ್ರೀಲಂಕಾ ಕಡೆಗೆ ಬರುತ್ತಿದ್ದ ಇರಾನ್ ಯುದ್ಧನೌಕೆ ಐರಿಸ್ ಡೆನಾ ಅನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ನಾಶಪಡಿಸಿತ್ತು. ನೌಕೆಯಲ್ಲಿದ್ದ 87 ಜನರನ್ನು ಕೊಂದಿತ್ತು. ಅದಾಗಿ ಒಂದು ದಿನದ ನಂತರ ಮತ್ತೊಂದು ಹಡಗು ಶ್ರೀಲಂಕಾದತ್ತ ಬರುತ್ತಿದೆ ಎಂದು ಸಚಿವ ನಳಿಂದ ಜಯತಿಸ್ಸ ತಿಳಿಸಿದ್ದಾರೆ.

ದೇಶದ ಜಲಗಡಿಯ ಕೊಂಚ ದೂರದಲ್ಲಿ ಹಡಗು ಇದೆ ಎಂದು ಎಂದು ಅವರು ತಿಳಿಸಿದ್ದಾರೆ.

ಹಡಗು ನೂರಕ್ಕೂ ಅಧಿಕ ಮಂದಿಯನ್ನು ಹೊಂದಿದೆ. ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ನಾಶಪಡಿಸಲಾದ ಹಡಗಿನ ರೀತಿಯೇ ಇದನ್ನೂ ಅಮೆರಿಕ ಯುದ್ಧ ನೌಕೆ ನಾಶಪಡಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ನಾವು ಜೀವಗಳ ರಕ್ಷಣೆಗೆ ಬೇಕಾದ ಎಲ್ಲ ಕ್ರಮ ಕೈಗೊಳ್ಳುತ್ತೇವೆ ಎಂದು ಜಯತಿಸ್ಸ ತಿಳಿಸಿದ್ದಾರೆ.

ಹಡಗಿನಿಂದ ತುರ್ತು ಕರೆ ಬಂದಿದ್ದು, ನೆರವನ್ನು ಕೇಳುತ್ತಿದೆ. ಹಡಗು ಸರ್ಕಾರದ ಅನುಮತಿಗೆ ಕಾಯುತ್ತಿದೆ. ಈ ಕುರಿತಾದ ಮಾಹಿತಿಯನ್ನು ಸರ್ಕಾರ ಕೂಡಲೇ ಬಹಿರಂಗಪಡಿಸಬೇಕು ಎಂದು ಸಂಸದ ನಮಲ್ ರಾಜಪಕ್ಸ್ ಹೇಳಿದ್ದಾರೆ.

ನಿನ್ನೆ ನಾಶವಾದ ಹಡಗಿನಲ್ಲಿ ಸಿಕ್ಕ 87 ನಾವಿಕರ ಮೃತದೇಹಗಳ ಹಸ್ತಾಂತರಕ್ಕೆ ಶ್ರೀಲಂಕಾ ನೌಕಾ ಪಡೆ ಸಿದ್ಧತೆಯಲ್ಲಿದ್ದ ಸಂದರ್ಭದಲ್ಲೇ ಮತ್ತೊಂದು ಹಡಗು ಕಾಣಿಸಿಕೊಂಡಿದೆ. ಈ ನಡುವೆ, ಹಡಗಿನಿಂದ ರಕ್ಷಿಸಲಾದ 32 ಇರಾನ್ ಪ್ರಜೆಗಳು ಗಾಲೆಯ ಪ್ರಮುಖ ಆಸ್ಪತ್ರೆಯಲ್ಲಿ ಭಾರಿ ಭದ್ರತೆ ನಡುವೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ದ್ವೀಪ ರಾಷ್ಟ್ರದ ಸಮುದ್ರ ವಲಯದ ಸುರಕ್ಷಿತ ಪ್ರದೇಶಕ್ಕೆ ಪ್ರವೇಶಿಸಲು ಇರಾನ್ ನೌಕೆ ವಿನಂತಿಸಿದೆ. ಈ ಸಂಬಂಧ ಚರ್ಚಿಸಲು ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಮಧ್ಯೆ, ಅಮೆರಿಕ ದಾಳಿಯಲ್ಲಿ ನಾಶವಾದ ಹಡಗಿನಲ್ಲಿದ್ದ ಇನ್ನೂ ಪತ್ತೆಯಾಗದ ಅಂದಾಜು 60 ಜನರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ನೌಕಾಪಡೆಯ ವಕ್ತಾರ ಬುದ್ಧಿಕ ಸಂಪತ್ ಹೇಳಿದ್ದಾರೆ.

ಇರಾನ್, ಶ್ರೀಲಂಕಾ ಚಹಾದ ಪ್ರಮುಖ ಖರೀದಿದಾರ ದೇಶವಾಗಿದೆ. ಚಹಾ ಶ್ರೀಲಂಕಾದ ಪ್ರಮುಖ ರಫ್ತು ಸರಕು.

ಹಿಂದೂ ಮಹಾಸಾಗರದಲ್ಲಿ ಸಂಘರ್ಷ ಉಲ್ಬಣ

ಐರಿಸ್ ಡೇನಾ ಮೇಲಿನ ದಾಳಿಯು ಯುದ್ಧದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಅಮೆರಿಕ, ಇರಾನ್ ಮತ್ತು ಇಸ್ರೇಲ್ ಸಂಘರ್ಷ ನಡೆಯುತ್ತಿರುವ ಕೊಲ್ಲಿಯಿಂದ ಈ ಪ್ರದೇಶ ಸಾವಿರಾರು ಮೈಲುಗಳಷ್ಟು ದೂರದಲ್ಲಿದೆ. ಆಸರೂ ಅಮೆರಿಕ ದಾಳಿ ನಡೆಸಿದೆ.

ಬುಧವಾರ ಬೆಳಗಿನ ಜಾವ ಅಮೆರಿಕ ದಾಳಿಗೆ ತುತ್ತಾಗಿದ್ದ ಇರಾನ್ ಹಡಗು ಶ್ರೀಲಂಕಾಗೆ ಅಪಾಯದ ಸೂಚನೆ ನೀಡಿತ್ತು, ಆದರೆ, ಶ್ರೀಲಂಕಾದ ರಕ್ಷಣಾ ಹಡಗು ಆ ಪ್ರದೇಶವನ್ನು ತಲುಪುವ ಹೊತ್ತಿಗೆ ಅದು ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ವಿಶಾಖಪಟ್ಟಣದಲ್ಲಿ ಮಿಲಿಟರಿ ತಾಲೀಮು ನಡೆಸಿ ಹಿಂದಿರುಗುತ್ತಿದ್ದ ಹಡಗಿನ ಮೇಲೆ ದಾಳಿ ನಡೆದಿತ್ತು.

ಇದಕ್ಕೆ ಉತ್ತರವಾಗಿ ಇರಾನ್ ಇಂದು ಇಸ್ರೇಲ್ ಮತ್ತು ಅಮೆರಿಕ ನೆಲೆಗಳ ಮೇಲೆ ತೀವ್ರ ದಾಳಿಗಳನ್ನು ನಡೆಸಿದ್ದು, ಅಂತರರಾಷ್ಟ್ರೀಯ ಜಲದಲ್ಲಿ ದಾಳಿ ನಡೆಸಿದ್ದಕ್ಕಾಗಿ ಅಮೆರಿಕವು ತೀವ್ರವಾಗಿ ವಿಷಾದಿಸುತ್ತದೆ ಎಂದು ಬೆದರಿಕೆ ಹಾಕಿದೆ.

'ಇರಾನ್ ತೀರದಿಂದ 2,000 ಮೈಲುಗಳಷ್ಟು ದೂರದಲ್ಲಿರುವ ಸಮುದ್ರದಲ್ಲಿ ಅಮೆರಿಕ ಒಂದು ದೌರ್ಜನ್ಯವನ್ನು ಮಾಡಿದೆ. ಸುಮಾರು 130 ನಾವಿಕರನ್ನು ಹೊತ್ತೊಯ್ಯುತ್ತಿದ್ದ ಭಾರತದ ನೌಕಾಪಡೆಯ ಅತಿಥಿಯಾಗಿದ್ದ ಫ್ರಿಗೇಟ್ ಡೇನಾವನ್ನು ಯಾವುದೇ ಎಚ್ಚರಿಕೆ ನೀಡದೆ ಅಂತರರಾಷ್ಟ್ರೀಯ ನೀರಿನಲ್ಲಿ ನಾಶ ಮಾಡಿದೆ' ಎಂದು ಇರಾನ್ ವಿದೇಶಾಂಗ ಸಚಿವ ಸಯೆದ್ ಅಬ್ಬಾಸ್ ಅರಾಘ್ಚಿ ಎಕ್ಸ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries