ನವದೆಹಲಿ: ಗ್ರಾಹಕನೊಬ್ಬ ತನ್ನ ಲಾಕರ್ನಲ್ಲಿ ಎಷ್ಟು ಬೆಲೆಬಾಳುವ ವಸ್ತುಗಳನ್ನು ಇಡುತ್ತಿದ್ದಾನೆ ಎಂಬುವುದನ್ನು ದಾಖಲಿಸುವುದು ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆಯಾಗಿದ್ದು, ಹೀಗಾಗಿ ಲಾಕರ್ನಲ್ಲಿರುವ ವಸ್ತುಗಳ ಮೌಲ್ಯದ ಆಧಾರದ ಮೇಲೆ ಪ್ರತ್ಯೇಕ ವಿಮಾ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ತಿಳಿಸಿದ್ದಾರೆ.
ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಗಢ್ಚಿರೊಲೀ ಚಿಮುರ್ ಲೋಕಸಭೆ ಕ್ಷೇತ್ರದ ಸಂಸದ (ಕಾಂಗ್ರೆಸ್) ನಾಮ್ದೇವ್ ದಸರಮ್ ಕಿರ್ಸಾನ್ ಅವರು ಕೇಳಿದ ಪೂರಕ ಪ್ರಶ್ನೆಗೆ ಉತ್ತರಿಸಿದ ಅವರು, 'ಬ್ಯಾಂಕ್ ಲಾಕರ್ಗಳ ವಿಷಯದಲ್ಲಿ ಯಾವುದೇ ನಷ್ಟ ಸಂಭವಿಸಿದರೆ, ವಾರ್ಷಿಕ ಲಾಕರ್ ಬಾಡಿಗೆಯ 100 ಪಟ್ಟು ಮೊತ್ತವನ್ನು ಪ್ರಮಾಣಿತ ವಿಮೆಯಾಗಿ ನಿಗದಿಪಡಿಸಲಾಗಿದೆ' ಎಂದಿದ್ದಾರೆ.

