ಮುಂಬೈ: ಪಶ್ಚಿಮ ಏಷ್ಯಾದ ಸಂಘರ್ಷದ ನಡುವೆ ಭಾರತದ ಧ್ವಜ ಹೊಂದಿರುವ 'ಗ್ರೀನ್ ಆಶಾ' (Green Asha) ಎಂಬ ಎಲ್ಪಿಜಿ (LPG) ಸಾಗಣೆ ನೌಕೆಯು ಭಾರತವನ್ನು ತಲುಪಿದೆ.
ಇಲ್ಲಿ ಬಿಪಿಸಿಎಲ್-ಐಒಸಿಎಲ್ ನಿರ್ವಹಿಸುವ ದ್ರವ ಸರಕು ವಿಭಾಗಕ್ಕೆ ಗ್ರೀನ್ ಆಶಾ ಹಡಗು ಬಂದು ನಿಂತಿದೆ.
ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ಯುದ್ಧ ಪ್ರಾರಂಭವಾದ ನಂತರ ಹೊರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಜೆಎನ್ಪಿಎ ತಲುಪಿದ ಮೊದಲ ನೌಕೆ ಇದಾಗಿದೆ.
ಈ ನೌಕೆಯು 15,400 ಟನ್ ಎಲ್ಪಿಜಿಯನ್ನು ಹೊತ್ತು ತಂದಿದೆ ಅದರಲ್ಲಿರುವ ಸರಕು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಶುಕ್ರವಾರವಷ್ಟೇ 'ಗ್ರೀನ್ ಸಾನ್ವಿ' (Green Sanvi) ಎಂಬ ನೌಕೆ 46,650 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತು ಹೊರ್ಮುಜ್ ಜಲಸಂಧಿಯನ್ನು ದಾಟಿತ್ತು. ವರದಿಗಳ ಪ್ರಕಾರ, ಸದ್ಯ ಈ ಭಾಗದಲ್ಲಿ ಭಾರತದ 'ಜಗ್ ವಿಕ್ರಮ್' (Jag Vikram) ಎಂಬ ನೌಕೆ ಮಾತ್ರ ಬಾಕಿ ಉಳಿದಿದ್ದು, ಅದು ಕೂಡ ಶೀಘ್ರದಲ್ಲೇ ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ.ಹೊರ್ಮುಜ್

