HEALTH TIPS

₹37 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಭೇದಿಸಿದ DRI: 24 ವಿದೇಶಿ ಮಹಿಳೆಯರ ಬಂಧನ

 ಮುಂಬೈ: ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಮಹಿಳೆಯರು ಅಕ್ರಮವಾಗಿ ಸಾಗಿಸುತ್ತಿದ್ದ ₹37 ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಖಚಿತ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಡಿಆರ್‌ಐ ಮುಂಬೈ ಘಟಕವು ಬುಧವಾರ ಆಪರೇಷನ್ ಧಹಾಬು ಬ್ಲಿಟ್ಜ್' ಕಾರ್ಯಾಚರಣೆಯನ್ನು ನಡೆಸಿತು, 'ಧಹಾಬು' ಎಂದರೆ ಸ್ವಹಿಲಿ ಭಾಷೆಯಲ್ಲಿ ಚಿನ್ನ ಎಂದರ್ಥ.

ಈ ಕಾರ್ಯಾಚರಣೆ ವೇಳೆ ಕೀನ್ಯಾದ ನೈರೋಬಿಯಿಂದ ಮುಂಬೈಗೆ ಬಂದ ಸುಮಾರು 24 ವಿದೇಶಿ ಮಹಿಳೆಯರನ್ನು ಬಂಧಿಸಲಾಗಿದ್ದು, ಅವರ ಬ್ಯಾಗ್‌ಗಳು ಮತ್ತು ಬಟ್ಟೆಗಳಿಂದ 25.10 ಕೆ.ಜಿ ಚಿನ್ನದ ಗಟ್ಟಿಗಳು ಮತ್ತು 4.27 ಕೆ.ಜಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹಿಳೆಯರಿಗೆ ಚಿನ್ನ ಮರೆಮಾಚಲು ಮತ್ತು ತಪಾಸಣೆಯಿಂದ ತಪ್ಪಿಸಿಕೊಳ್ಳಲು ತರಬೇತಿ ನೀಡಲಾಗಿತ್ತು, ಮಹಿಳೆಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಆದರೆ, ದಂಧೆಯ ಪ್ರಮುಖರನ್ನು ಬಂಧಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries