HEALTH TIPS

5ನೇ 'ಎಸ್‌-400 ಟ್ರಿಂಫ್' ಕ್ಷಿಪಣಿ ವ್ಯವಸ್ಥೆ ನಿರೀಕ್ಷೆಯಲ್ಲಿ ಭಾರತ

ನವದೆಹಲಿ: ನಾಲ್ಕನೇ 'ಎಸ್‌-400 ಟ್ರಿಂಫ್' ಕ್ಷಿಪಣಿ ವ್ಯವಸ್ಥೆಯು ಮುಂದಿನ ತಿಂಗಳಾರಂಭದಲ್ಲಿ ರಷ್ಯಾದಿಂದ ಭಾರತಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಭದ್ರತಾ ಸಂಸ್ಥೆಯಲ್ಲಿನ ಮೂಲಗಳು ಮಂಗಳವಾರ ತಿಳಿಸಿವೆ.

ರಷ್ಯಾದಿಂದ ಐದು 'ಎಸ್‌-400 ಟ್ರಿಂಫ್' ಕ್ಷಿಪಣಿ ವ್ಯವಸ್ಥೆ ಖರೀದಿಸುವ 5 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಭಾರತವು 2018ರ ಅಕ್ಟೋಬರ್‌ನಲ್ಲಿ ಸಹಿ ಮಾಡಿತ್ತು.

ಈಗಾಗಲೇ ಇಂತಹ ಮೂರು ಕ್ಷಿಪಣಿ ವ್ಯವಸ್ಥೆಗಳನ್ನು ರಷ್ಯಾ ಭಾರತಕ್ಕೆ ಪೂರೈಸಿದೆ.

ಐದನೇ 'ಎಸ್‌-400 ಟ್ರಿಂಫ್' ಕ್ಷಿಪಣಿ ವ್ಯವಸ್ಥೆಯು ನವೆಂಬರ್‌ನಲ್ಲಿ ಪೂರೈಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ.

ಎಸ್‌-400 ಟ್ರಿಂಫ್ ಕ್ಷಿಪಣಿ ಉಡಾವಣಾ ವ್ಯವಸ್ಥೆಯು 'ಆಪರೇಷನ್‌ ಸಿಂಧೂರ'ದಲ್ಲಿ ಪ್ರಮುಖ ಪಾತ್ರವಹಿಸಿತ್ತು.

ರಷ್ಯಾದಿಂದ ಮತ್ತೆ ಐದು ಎಸ್‌-400 ವ್ಯವಸ್ಥೆಯನ್ನು ಖರೀದಿಸುವ ಒಪ್ಪಂದವನ್ನು ಭಾರತ ಕಳೆದ ತಿಂಗಳು ಮಾಡಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries