HEALTH TIPS

ಶೇ 60ರಷ್ಟು ಸೀಟುಗಳಿಗೆ ಹೆಚ್ಚುವರಿ ಶುಲ್ಕ ಬೇಡ ನಿಯಮಕ್ಕೆ ತಡೆ: ಕೇಂದ್ರ ಸರ್ಕಾರ

 ನವದೆಹಲಿ: ದೇಶಿಯ ವಿಮಾನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ ವಿಮಾನಗಳ ಒಟ್ಟಾರೆ ಆಸನಗಳ ಪೈಕಿ ಶೇ 60ರಷ್ಟು ಸೀಟುಗಳನ್ನು ಉಚಿತವಾಗಿ ಆಯ್ಕೆ ಮಾಡಿಕೊಳ್ಳುವ ನಿಯಮಕ್ಕೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ.


ಮಾರ್ಚ್ 18 ರಂದು ವಿಮಾನಗಳು ತಮ್ಮ ಒಟ್ಟಾರೆ ಸೀಟುಗಳ ಪೈಕಿ ಶೇ 60ರಷ್ಟನ್ನು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ಪ್ರಯಾಣಿಕರಿಗೆ ಲಭ್ಯ ಇರುವಂತೆ ಮಾಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಸ್ಥಳೀಯ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿತ್ತು.

ಈ ಹೊಸ ನಿಯಮವನ್ನು ಏಪ್ರಿಲ್‌ 20ರಿಂದ ಜಾರಿಗೆ ತರಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿತ್ತು. ಆದರೆ ಸರ್ಕಾರದ ಈ ಆದೇಶಕ್ಕೆ ವಿಮಾನಯಾನ ಕಂಪನಿಗಳ ಒಕ್ಕೂಟ ಫೆಡರೇಶನ್ ಆಫ್ ಇಂಡಿಯನ್ ಏರ್‌ಲೈನ್ಸ್ (ಈIಂ) ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ನಿಯಮ ಜಾರಿಗೆ ಬಂದರೆ ವಾಣಿಜ್ಯ ಕಾರ್ಯಾಚರಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿತ್ತು.

ಈ ನಿಯಮದಿಂದಾಗಿ ನಷ್ಟವನ್ನು ಸರಿದೂಗಿಸಲು ವಿಮಾನ ಪ್ರಯಾಣ ದರವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು ಎಂದು ಫೆಡರೇಶನ್ ಹೇಳಿತ್ತು.

ಇದರಿಂದ ಈ ನಿಯಮವನ್ನು ಹೆಚ್ಚಿನ ಪರಿಶೀಲನೆಗಾಗಿ ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಈಗ ವಿಮಾನಗಳಲ್ಲಿ ನಿರ್ದಿಷ್ಟ ಸೀಟುಗಳು ಹಾಗೂ ಕೆಲವು ಸೌಕರ್ಯಗಳು ಬೇಕೆನ್ನುವವರು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಶೇ 60ರಷ್ಟು ಸೀಟುಗಳನ್ನು ಇಂತಹ ಶುಲ್ಕ ಪಡೆಯದೆ ಪ್ರಯಾಣಿಕರಿಗೆ ಮುಕ್ತವಾಗಿ ಒದಗಿಸಬೇಕು ಎಂದು ಸಚಿವಾಲಯವು ಸೂಚಿಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries