HEALTH TIPS

ಪುರುಷರ ಕೋಣೆಯೊಳಗೆ ಹೋಗದೆ ಶೇ. 90 ಮಹಿಳೆಯರು ರಾಜಕಾರಣಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ: ಸಂಸದ ಪಪ್ಪು ಯಾದವ್‌ ವಿವಾದಾತ್ಮಕ ಹೇಳಿಕೆ

ಪಾಟ್ನಾ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲೊಪ್ಪಿದ ಬೆನ್ನಲ್ಲೇ, ಬಿಹಾರದ ಪ್ರಭಾವಿ ನಾಯಕ ಹಾಗೂ ಪಕ್ಷೇತರ ಸಂಸದ ಪಪ್ಪು ಯಾದವ್ ನೀಡಿರುವ ಹೇಳಿಕೆಯೊಂದು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತದ ಬಹುತೇಕ ಮಹಿಳೆಯರು ಹಿರಿಯ ರಾಜಕಾರಣಿಗಳೊಂದಿಗೆ 'ಲೈಂಗಿಕ ರಾಜಿ' ಮಾಡಿಕೊಳ್ಳದೆ ರಾಜಕೀಯ ಪ್ರವೇಶಿಸಲು ಸಾಧ್ಯವಿಲ್ಲ ಎಂಬ ಅರ್ಥ ಬರುವಂತೆ ಅವರು ಮಾತನಾಡಿದ್ದಾರೆ.

ಸೋಮವಾರ ಮಾತನಾಡಿದ ಅವರು, "ಭಾರತದಲ್ಲಿ ಮಹಿಳೆಯರನ್ನು ದೇವತೆಗಳೆಂದು ಕರೆಯಲಾಗುತ್ತದೆ. ಆದರೆ ದುರದೃಷ್ಟವಶಾತ್ ಅವರಿಗೆ ಈ ದೇಶದಲ್ಲಿ ಎಂದಿಗೂ ಗೌರವ ಸಿಗುವುದಿಲ್ಲ. ಇದಕ್ಕೆ ಇಲ್ಲಿನ ವ್ಯವಸ್ಥೆ ಮತ್ತು ಸಮಾಜವೇ ಜವಾಬ್ದಾರಿ," ಎಂದರು. ಮುಂದುವರಿದು, "ಶೇ. 90 ರಷ್ಟು ಮಹಿಳೆಯರು ರಾಜಕಾರಣಿಗಳ ಕೋಣೆಯನ್ನು ಪ್ರವೇಶಿಸದೆ (ಲೈಂಗಿಕ ಸುಖ ನೀಡುವುದು ಎಂಬ ಅರ್ಥದಲ್ಲಿ) ತಮ್ಮ ರಾಜಕೀಯ ಜೀವನವನ್ನು ಆರಂಭಿಸಲು ಸಾಧ್ಯವಿಲ್ಲ" ಎಂದು ಗಂಭೀರ ಆರೋಪ ಮಾಡಿದರು.

ಮಹಿಳಾ ಆಯೋಗದಿಂದ ನೋಟಿಸ್: ಯಾದವ್ ಉದ್ಧಟತನ

ಈ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ, ಬಿಹಾರ ರಾಜ್ಯ ಮಹಿಳಾ ಆಯೋಗವು ಮಂಗಳವಾರ ಪಪ್ಪು ಯಾದವ್‌ಗೆ ನೋಟಿಸ್ ಜಾರಿ ಮಾಡಿದ್ದು, ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ಸೂಚಿಸಿದೆ. ಆದರೆ ಇದಕ್ಕೆ ಬಗ್ಗದ ಯಾದವ್, ಆಯೋಗದ ಸದಸ್ಯೆ ಸಜಲ್ ಝಾ ಅವರೇ ಹಲವು ನಾಯಕರೊಂದಿಗೆ ಇರುವ ಫೋಟೋಗಳು ನನ್ನ ಬಳಿ ಇವೆ, ಅವುಗಳನ್ನು ಬಹಿರಂಗಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. "ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಮೇಲೆ ಕಲ್ಲು ಎಸೆಯಬಾರದು," ಎಂದು ಸಜಲ್ ಝಾ ಅವರನ್ನು ಕುಟುಕಿದ್ದಾರೆ.

ರಾಜಕೀಯ ಆಕ್ರೋಶ

ಪಪ್ಪು ಯಾದವ್ ಹೇಳಿಕೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಕಾಂಗ್ರೆಸ್ ವಕ್ತಾರೆ ಶಾಮಾ ಮೊಹಮ್ಮದ್ ಅವರು ಯಾದವ್ ಅವರನ್ನು "ಥರ್ಡ್ ರೇಟ್ ಸಂಸದ" ಎಂದು ಕರೆದಿದ್ದಾರೆ. "ನಮ್ಮಲ್ಲಿ ಅನೇಕರು ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದೇವೆ. ಪಪ್ಪು ಯಾದವ್ ತಕ್ಷಣವೇ ಕ್ಷಮೆ ಯಾಚಿಸಬೇಕು," ಎಂದು ಆಗ್ರಹಿಸಿದ್ದಾರೆ. ಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು, "ಇದು ಕಾಂಗ್ರೆಸ್ ಬೆಂಬಲಿತ ನಾಯಕನ ಮಹಿಳಾ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. 'ಲಡ್ಕಿ ಹೂಂ, ಲಡ್ ಸಕ್ತಿ ಹೂಂ' ಎನ್ನುವ ಪ್ರಿಯಾಂಕಾ ಗಾಂಧಿ ಈಗ ಏಕೆ ಮೌನವಾಗಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಸೋಲು

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯು ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಮಸೂದೆಯ ಪರವಾಗಿ 298 ಮತ್ತು ವಿರುದ್ಧವಾಗಿ 230 ಮತಗಳು ಬಿದ್ದವು. ಸಂವಿಧಾನ ತಿದ್ದುಪಡಿಗೆ ಅಗತ್ಯವಿದ್ದ 352 ಮತಗಳ ಕೊರತೆಯಿಂದಾಗಿ ಮಸೂದೆ ಬಿದ್ದುಹೋಯಿತು. ಇತ್ತೀಚಿನ ವರ್ಷಗಳಲ್ಲಿ ವಿರೋಧ ಪಕ್ಷಗಳು ಒಗ್ಗೂಡಿ ಸರ್ಕಾರದ ಪ್ರಮುಖ ಪ್ರಸ್ತಾವನೆಯನ್ನು ತಡೆಹಿಡಿದ ಅಪರೂಪದ ಘಟನೆ ಇದಾಗಿದೆ.

ಅನಾರೋಗ್ಯಕ್ಕೆ ಈಡಾದ ಸಂಸದ

ನೋಟಿಸ್ ಸಿಕ್ಕ ಕೆಲವೇ ಗಂಟೆಗಳಲ್ಲಿ, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪಪ್ಪು ಯಾದವ್ ಬಿಸಿಲ ತಾಪಕ್ಕೆ (Heatstroke) ತುತ್ತಾಗಿ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries