HEALTH TIPS

ಪ್ರಿಯದರ್ಶಿನಿ ಉಚಿತ ಯೋಜನೆ-ಸಂಕಷ್ಟದಲ್ಲಿ ಖಾಸಗಿ ಬಸ್ ಉದ್ದಿಮೆ-ಕೆಎಸ್ಸಾರ್ಟಿಸಿ ಆದಾಯಗಳಿಕೆಗೆ ಬಸ್ಸಿನೊಳಗೆ ಬರಲಿದೆ ಜಾಹೀರಾತು!

ಕಾಸರಗೋಡು: ಕೇರಳ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮಹಿಳೆಯರಿಗೆ ಪ್ರಿಯದರ್ಶಿನಿ ಉಚಿತ ಯೋಜನೆಯ ಸೌಲಭ್ಯ ಆರಂಭಗೊಂಡ ನಂತರ ಕಾಸರಗೋಡು ಜಿಲ್ಲೆಯಲ್ಲಿ ಉಚಿತ ಸೌಲಭ್ಯಗಳನ್ನು ಪಡೆಯುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. 


ಉಚಿತ ಸೌಲಭ್ಯದ ಸವಲತ್ತುಹೊಂದಿರುವ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ದಟ್ಟನೆ ಹೆಚ್ಚಾಗುತ್ತಿದ್ದು,  ಹಣಕೊಟ್ಟು ಟಿಕೆಟ್ ಪಡೆದು ಪ್ರಯಾಣಿಸುವ ಪುರುಷ ಪ್ರಯಾಣಿಕರಿಗೆ ಸೀಟುಲಭ್ಯವಾಗದೆ ಪರದಾಡುವ ಸಥಿತಿ ನಿರ್ಮಣವಾಘುತ್ತಿದೆ. ಬಸ್ಸಿನ ಬಹುತೇಕ ಸಈಟುಗಳನ್ನು ಮಹಿಳಾ ಪ್ರಯಾಣಿಕರೇ ಆಕ್ರಮಿಸಿಕೊಳ್ಳುತ್ತಿದ್ದು, ವೃದ್ಧರು ಸೇರಿದಂತೆ ಪುರುಷರು ನಿಂತುಕೊಂಡೇ ಪ್ರಯಾಣಿಸಬೇಏಕಾದ ಅನಿವಾರ್ಯತೆ ಎದುರಾಗುತ್ತಿದೆ.  

ಕಾಸರಗೋಡುಜಿಲ್ಲೆಯಲ್ಲಿ ಪ್ರಿಯದರ್ಶಿನಿ ಉಚಿತ ಬಸ್ ಸಂಚಾರ ಆರಂಭಗೊಂಡ ಮೊದಲ ಒಂದೆರಡು ದಿನ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದರೂ, ದಿನಕಳೆದಂತೆ ಮಹಿಳೆಯರ ಸಂಖ್ಯೆ ಬೆಳೆಯುತ್ತಾ ಹೋಗುತ್ತಿದ್ದು, ಪ್ರತಿ ರೂಟಲ್ಲಿ ಪುರುಷರಿಗೆ ಬಸ್ಸನ್ನೇರಲಾಗದ ಸ್ಥಿತಿ ನಿರ್ಮಾನವಾಗುತ್ತಿದೆ. ಜೂನ್ 16ರಂದು ಜಿಲ್ಲೆಯಲ್ಲಿ 54,851 ಮಹಿಳೆಯರು ಉಚಿತ ಬಸ್ ಪ್ರಯಾಣ ನಡೆಸಿದ್ದರೆ, 17ರಂದು ಈ ಸಂಖ್ಯೆ 58,855ಕ್ಕೇರಿತ್ತು. ನಂತರದ ದಿನಗಳಲ್ಲಿ ಈ ಸಂಖ್ಯೆ ವೃದ್ಧಿಯಾಗುತ್ತಾ ಸಾಗಿದೆ.  ದಿನಂಪ್ರತಿ ಸರಾಸರಿ ಐದು ಸಾವಿರ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ಪಡೆಯುತ್ತಿದ್ದಾರೆ. ಇದರಿಂದ ಹಗಲಿನ ವೇಳೆ ಬಸ್‍ಗಳು ಪ್ರಯಣಿಕರಿಂದ ತುಂಬಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕೆಎಸ್ಸಾರ್ಟೀಸಿ ಸಿಬ್ಬಂದಿಯೊಬ್ಬರು ತಿಳಿಸುತ್ತಾರೆ.

ಕೆಎಸ್ಸಾರ್ಟಿಸಿ ನಿತ್ಯ ಕಲೆಕ್ಷನ್ ಕುಸಿತ:

ಕೆಎಸ್ಸಾರ್ಟಿಸಿ ಕಾಸರಗೋಡು ಡಿಪೆÇೀಗೆ ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ಕಾಸರಗೋಡು- ಮಂಗಳೂರು ಅಂತಾರಾಜ್ಯ ರೂಟಿನಲ್ಲಿ  ಪ್ರತಿ ಕೇರಳಂ ಕೆಎಸ್ಸಾರ್ಟಿಸಿಗೆ ದಿನವೊಂದಕ್ಕೆ ಸರಾಸರಿ 35ರಿಂದ 40ಸಾವಿರ ರೂ. ವರೆಗೆ ಸಂಗ್ರಹವಾಗುತ್ತಿದ್ದರೆ,  ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯದ ಬಳಿಕ ಈ ಮೊತ್ತ 10ರಿಂದ 12ಸಾವಿರ ರೂ. ಗಳಷ್ಟೇ ಲಭಿಸುತ್ತಿದೆ. ಒಟ್ಟು ಪ್ರಯಾಣಿಕರ ಪೈಕಿ ಶೇ. 75ರಷ್ಟು ಮಹಿಳೆಯರೇ ಆಗಿದ್ದು, ಅವರಿಗೆ ಜೀರೋ ಟಿಕೆಟ್ ವಿತರಣೆಯಾಗುತ್ತಿದೆ. ಕೆಎಸ್ಸಾರ್ಟಿಸಿಗೆ ಸರ್ಕಾರದಿಂದ ಈ ನಷ್ಟದ ಮೊತ್ತ ಲಭ್ಯವಾಗುತ್ತಿದ್ದರೂ, ವಾರ್ಷಿಕ ಸುಮಾರು 800ಕೋಟಿ ರೂ. ಮೊತ್ತ ಸರ್ಕಾರ ನಿಗಮಕ್ಕೆ ಸಲ್ಲಿಸಬೇಕಾಗುತ್ತದೆ.

ಜಾಹೀರಾತಿಗೆ ಮೊರೆ?...

ಕೇರಳಂ ಕೆಎಸ್ಸಾರ್ಟೀಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಪ್ರಿಯದರ್ಶಿನಿ ಯೋಜನೆ ಮೂಲಕ ಉಂಟಾಗುವ ಆರ್ಥಿಕ ನಷ್ಟ ಸರಿದೂಗಿಸಲು ಸರ್ಕಾರ ಜಾಹೀರಾತುಗಳ ಮೊರೆ ಹೋಗಿದೆ. ರಾಜ್ಯದ ಕೆಲವೊಂದು ಬಸ್ಸುಗಳಲ್ಲಿ ಸ್ಮಾರ್ಟ್ ಟಿ. ವಿ. ಅಳವಡಿಸಿ ಜಾಹೀರಾತು ಪ್ರದರ್ಶನ ಈಗಾಗಲೇ ಆರಂಭಗೊಂಡಿದೆ. ಕಾಸರಗೋಡು-ಮಂಗಳೂರು ರೂಟಿನ ಹಲವು ಬಸ್ಸುಗಳಲ್ಲಿ ಈಗಾಗಲೇ ಟಿ. ವಿ. ಅಳವಡಿಸಲಾಗಿದ್ದು, ಜಾಹೀರಾತುಗಳ ನಡುವೆ ಹಾಡುಗಳನ್ನೂ ಪ್ರಸಾರ ಮಾಡುವ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.

ಸಂಕಷ್ಟದಲ್ಲಿ ಖಾಸಗಿ ಬಸ್ ಉದ್ದಿಮೆ:

ಸರ್ಕಾರದ ಪ್ರಿಯದರ್ಶಿನಿ ಉಚಿತ ಯೋಜನೆಯಿಂದ ಖಾಸಗಿ ಬಸ್‍ಗಳು ಸಂಕಷ್ಟ ಅನುಭವಿಸುಂತಾಗಿದೆ. ಗ್ರಾಮೀಣ ಪ್ರದೇಶಗಳ, ಕೆಎಸ್ಸಾರ್ಟಿಸಿ ಸೌಲಭ್ಯವಿಲ್ಲದ ಪ್ರದೇಶದಲ್ಲಿ ಮಾತ್ರ ಖಾಸಗಿ ಬಸ್ ಏರುತ್ತಿರುವ ಮಹಿಳೆಯರು, ಕೆಎಸ್ಸಾರ್ಟಿಸಿ ಸಂಚಾರವಿರುವ ಪ್ರದೇಶದಲ್ಲಿ ಇಳಿದು, ಅಲ್ಲಿಂದ ಉಚಿತ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಕೇರಳದಲ್ಲಿ ಸಂಚಾರ ನಡೆಸುತ್ತಿದ್ದ 35ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‍ಗಳ ಸಂಖ್ಯೆ ಇಂದು 10ಸಾವಿರಕ್ಕೂ ಕಡಿಮೆಯಿದೆ. ಕೆಎಸ್ಸಾರ್ಟಿಸಿ ಸೇವೆಯಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಬಸ್‍ಗಳಲ್ಲಿ ಪ್ರಯಾಣಿಕರು ಕಂಡುಬರುತ್ತಿದ್ದು, ಉಳಿದಂತೆ ಖಾಸಗಿ ಬಸ್‍ಗಳು ಖಾಲಿಯಾಗಿ ಸಂಚಾರ ನಡೆಸುತ್ತಿದೆ. ಖಾಸಗಿ ಬಸ್‍ಗಳೇ ಸಂಚಾರ ನಡೆಸುತ್ತಿರುವ ಕೆಲವೊಂದು ರೂಟ್‍ಗಳಲ್ಲಿ ಕೆಎಸ್ಸಾರ್ಟಿಸಿ ಸೇವೆ ಆರಂಭಿಸುವಂತೆ ಸಾರ್ವಜನನಿಕರು ಆಗ್ರಹಿಸುತ್ತಿದ್ದಾರೆ. 


ಅಭಿಮತ: 

ಖಾಸಗಿ ಬಸ್ ಉದ್ದಿಮೆ ಸಂರಕ್ಷಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರ ಬಜೆಟ್‍ನಲ್ಲಿ ರಸ್ತೆ ತೆರಿಗೆಯನ್ನು ಶೇ.50 ರಷ್ಟು ಕಡಿತಗೊಳಿಸಿರುವುದಾಗಿ ಘೋಷಿಸಿದ್ದರೂ, ಸರ್ಕಾರದ ಈ ಘೋಷಣೆಯಿಂದ ಬಸ್ ಮಾಲಿಕರಿಗೆ ಹೆಚ್ಚಿನ ಪ್ರಯೋಜನವಾಗದು. ಇದರಿಂದ ತ್ರೈಮಾಸಿಕ 25ರಿಂದ 30ಸಾವಿರ ರೂ. ವರೆಗೆ ತೆರಿಗೆ ಪಾವತಿಸುತ್ತಿರುವ ಖಾಸಗಿ ಬಸ್‍ಗಳಿಗೆ ದಿನವೊಂದಕ್ಕೆ 150ರೂ. ಮಾತ್ರ ಉಳಿಕೆ ಸಾಧ್ಯ. ಖಾಸಗಿ ಬಸ್‍ಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಿತ ಕಾಪಾಡುವುದರ ಜತೆಗೆ ಉದ್ದಿಮೆಯನ್ನು ಸಂಕಷ್ಟದಿಂದ ಪಾರುಮಾಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.

ಕೆ. ಗಿರೀಶ್, ಅಧ್ಯಕ್ಷರು

ಖಾಸಗಿ ಬಸ್ ಮಾಲಿಕರ ಸಂಘಟನೆ, ಕಾಸರಗೋಡು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries