HEALTH TIPS

ಮಂಜೇಶ್ವರ ಬಿಆರ್‍ಸಿಯಲ್ಲಿ ಛತ್ರಿ ತಯಾರಿಕೆ ತರಬೇತಿ

ಉಪ್ಪಳ: ವಿಶೇಷ ಚೇತನ ವಿದ್ಯಾರ್ಥಿಗಳ ಪೋಷಕರಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ಅವಕಾಶಗಳನ್ನು ಒದಗಿಸುವ ಭಾಗವಾಗಿ, ಮಂಜೇಶ್ವರ ಬಿಆರ್‍ಸಿ ಛತ್ರಿ ತಯಾರಿಕೆ ತರಬೇತಿಯನ್ನು ಆಯೋಜಿಸಿತು. 


ಬಿಆರ್‍ಸಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ರೆಹಮಾನ್ ಉದ್ಘಾಟಿಸಿದರು. ಮಂಜೇಶ್ವರ ಎಇಒ ನಾರಾಯಣ.ಡಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಎಇಒ ಜಾರ್ಜ್ ಕ್ರಾಸ್ತಾ, ಎಚ್‍ಎಂ ಪೋರಂ ಸಂಚಾಲಕ ಸತ್ಯಪ್ರಕಾಶ್, ಡಯಟ್ ಫ್ಯಾಕಲ್ಟಿ ಡಾ. ಸಿದ್ದಿಕ್ ಅಸ್ಲಾಂ, ವಾರ್ಡ್ ಸದಸ್ಯೆ ನಾಜಿಯಾ ಅಜೀಜ್, ಜಿ.ಎಲ್.ಪಿ.ಎಸ್. ಮುಳಿಂಜ ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ.ಪಿ ಭಾಗವಹಿಸಿದ್ದರು. 


ಭಿನ್ನ ಸಾಮಥ್ರ್ಯದ ವಿದ್ಯಾರ್ಥಿಗಳ ಪೋಷಕರು ಆದಾಯದ ಮೂಲವನ್ನು ಕಂಡುಕೊಳ್ಳಲು ಮತ್ತು ಸ್ವಾವಲಂಬನೆಯನ್ನು ಸಾಧಿಸಲು ಸಹಾಯ ಮಾಡುವ ರೀತಿಯಲ್ಲಿ ತರಬೇತಿಯನ್ನು ಆಯೋಜಿಸಲಾಗಿತ್ತು. ಬಿ.ಆರ್.ಸಿ ಶಿಕ್ಷಕಿಯರಾದ ಬಿಂದು.ಎ.ಪಿ ಮತ್ತು ಸರೋಜನಿ ಪಿ ತರಬೇತಿಯ ನೇತೃತ್ವ ವಹಿಸಿದ್ದರು. ಮಂಜೇಶ್ವರ ಬಿ.ಪಿ.ಸಿ. ರಾಜಗೋಪಾಲನ್.ಪಿ ಸ್ವಾಗತಿಸಿ, ತರಬೇತುದಾರರು ವಂದಿಸಿದರು. ತರಬೇತಿಯ ಮೂಲಕ ಪೋಷಕರು ಹೊಸ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಮತ್ತು ಅವರ ಕುಟುಂಬದ ಆದಾಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಬಿ.ಆರ್.ಸಿ ಅಧಿಕಾರಿಗಳು ಆಶಿಸುತ್ತಿದ್ದಾರೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries