ಕಾಸರಗೋಡು: ನಗರದ ಮೇಲ್ಪರಂಬದಲ್ಲಿ ಕ್ರೇನ್ ಹೇರಿಕೊಂಡು ಸಂಚರಿಸುತ್ತಿದ್ದ ಟ್ರಕ್‍ಗೆ ಬೆಂಕಿ ತಗುಲಿದ ಪರಿಣಾಮ ಕ್ರೇನಿಗೆ ಹಾನಿ ಸಂಭವಿಸಿದೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ಆಂಧ್ರಪ್ರದೇಶ ನಿವಾಸಿ ನಾರಾಯಣ ರೆಡ್ಡಿ ಎಂಬವರ ಮಾಲಿಕತ್ವದ ಭಾರಿ ಪ್ರಮಾಣದ ಕ್ರೇನ್ ಹಾಗೂ ಟ್ರಕ್‍ಗೆ ಬೆಂಕಿ ತಗಲಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂಗವಾಗಿ ಪಡನ್ನಕ್ಕಾಡ್ ರೈಲ್ವೇ ಮೇಲ್ಸೇತುವೆಯ ಗರ್ಡರ್ ಅಳವಡಿಸುವ ಕೆಲಸ ಮುಗಿಸಿ ಟ್ರಕ್ ಕ್ರೇನ್‍ನೊಂದಿಗೆ ವಾಪಸಾಗುವ ಮಧ್ಯೆ ಟ್ರಕ್‍ನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಲಾರಿಯನ್ನು ನಿಲ್ಲಿಸಿ ನೀಡಿದ ಮಾಹಿತಿಯನ್ವಯ ಅಗ್ನಿಶಾಮಕದಳದ ಸೀನಿಯರ್ ಫಯರ್ ಏಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬೆಂಕಿ ಶಮನಗೊಳಿಸಿರುವುದರಿಂದ ಹೆಚ್ಚಿನ ದುರಂತ ತಪ್ಪಿದೆ.
ಕ್ರೇನ್ ಸಾಗಿಸುತ್ತಿದ್ದ ಟ್ರಕ್‍ಗೆ ಬೆಂಕಿ- ತಪ್ಪಿದ ಭಾರೀ ದುರಂತ
0
ಜೂನ್ 23, 2026

Tags